Sunday, 8th September 2024

ಮಾರಿಷಸನ ಉತ್ತರ ಅಗಾಲೆಗಾ ದ್ವೀಪದಲ್ಲಿ ಭಾರತೀಯ ಸೇನಾ ನೆಲೆ

ನವದೆಹಲಿ: ಮುಂಬೈನಿಂದ 3 ಸಾವಿರ 729 ಕಿ.ಮೀ. ದೂರದಲ್ಲಿರುವ ಮಾರಿಷಸನ ಉತ್ತರ ಅಗಾಲೆಗಾ ದ್ವೀಪದಲ್ಲಿ ಭಾರತೀಯ ಸೇನಾ ನೆಲೆಗಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲಾಗಿದೆ.

ಇದರಲ್ಲಿ ವಿಮಾನಗಳಿಗಾಗಿ ರನ್‌ವೇಗಳು, ಜೆಟ್‌ ಇತ್ಯಾದಿಗಳನ್ನು ಒಳಗೊಂಡಿದೆ.

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಮಂತ್ರಿ ಪ್ರವಿಂದ ಕುಮಾರ ಜುಗನಾಥ ಇವರು ಅವರು ಆನ್‌ಲೈನ್‌ನಲ್ಲಿ ಉಪಸ್ಥಿತರಿದ್ದು ಇಲ್ಲಿಯ ಒಟ್ಟು 6 ಯೋಜನೆಗಳನ್ನು ಉದ್ಘಾಟಿಸಿದರು.

1. ಭಾರತೀಯ ನೌಕಾಪಡೆಯ ‘ಪಿ-8ಐ’ ವಿಮಾನ ಜಲಾಂತರ್ಗಾಮಿಗಳ ಮೇಲೆ ನಿಗಾ ಇಡಲು ನಿಯೋಜಿಸಲಾಗುವುದು. ಅಗಾಲೆಗಾ ದ್ವೀಪದ ಮೇಲಿರುವ ಈ ನೆಲೆಯನ್ನು ನಿರ್ವಹಿಸಲು ಭಾರತೀಯ ನೌಕಾಪಡೆಯ 50 ಸೈನಿಕರನ್ನು ನಿಯೋಜಿಸಲಾಗುವುದು. ಅಗಾಲೆಗಾ ದ್ವೀಪ 12 ಕಿ.ಮೀ ಉದ್ದವಿದ್ದು ಮತ್ತು 1.5. ಕಿ.ಮಿ ಅಗಲವಿದೆ. ಇಲ್ಲಿ ಸುಮಾರು 300 ಜನರು ವಾಸಿಸುತ್ತಿದ್ದಾರೆ.

2. ಸದ್ಯ ಹಿಂದೂ ಮಹಾಸಾಗರದ ರಕ್ಷಣೆಗಾಗಿ ನಿಯೋಜಿಸಲಾದ ಭಾರತೀಯ ನೌಕಾಪಡೆಯ ಯುದ್ಧನೌಕೆಗಳು ಇಂಧನ ಪಡೆಯಲು ಬ್ರಿಟನ್ -ಅಮೇರಿಕಾ ಸೇನಾನೆಲೆ ಡಿಎಗೊ ಗಾರ್ಸಿಯಾಗೆ ಹೋಗಬೇಕಾಗುತ್ತದೆ. ಅಗಾಲೆಗಾದ ನೆಲೆಯಿಂದ ಭಾರತೀಯ ನೌಕಾದಳದ ಸಮಯ ಉಳಿತಾಯ ವಾಗುವುದು.

3. ಆಸ್ಟ್ರೇಲಿಯದ ನ್ಯಾಷನಲ್ ಯುನಿವರ್ಸಿಟಿಯ ತಜ್ಞ ಸ್ಯಾಮ್ಯುಯೆಲ್ ಬಾಶಫಿಲ್ಡ ಮಾತನಾಡಿ, ಅಗಾಲೆಗಾ ಮಹತ್ವದ ಸ್ಥಳದಲ್ಲಿದೆ. ಇದರಿಂದ ಇಲ್ಲಿಂದ ಸಾಗುವ ಚೀನಾದ ಸರಕು ಸಾಗಣೆ ನೌಕೆಗಳು, ಯುದ್ಧ ನೌಕೆಗಳು ಮತ್ತು ಜಲಾಂತರ್ಗಾಮಿಗಳ ಮೇಲೆ ನಿಗಾ ಇಡುತ್ತವೆ.

4. ಪಾಕಿಸ್ತಾನದ ಗ್ವಾದರ್, ಶ್ರೀಲಂಕಾದ ಹಂಬಂಟೋಟಾ ಮತ್ತು ಆಫ್ರಿಕಾದ ಕೆಲವು ದೇಶಗಳಲ್ಲಿ ಬಂದರು ಯೋಜನೆಗಳಲ್ಲಿ ಚೀನಾ ಬಂಡವಾಳ ಹೂಡಿಕೆ ಮಾಡಿದೆ. ಆ ಮೂಲಕ ಅದು ಭಾರತವನ್ನು ಸುತ್ತುವರಿಯಲು ಪ್ರಯತ್ನಿಸುತ್ತಿದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಸರಕಾರವು ಹಿಂದೂ ಮಹಾ ಸಾಗರದಲ್ಲಿ 2015 ರಿಂದ ‘ಭದ್ರತೆ ಮತ್ತು ಅಭಿವೃದ್ಧಿ’ ಯೋಜನೆಯನ್ನು ಪ್ರಾರಂಭಿಸಿದೆ.

Leave a Reply

Your email address will not be published. Required fields are marked *

error: Content is protected !!