ತಿರುವನಂತಪುರಂ : ಕೇರಳದ ತಿರುವನಂತಪುರಂನ ಮೇಯರ್ ಆರ್ಯ ರಾಜೇಂದ್ರನ್ ಬಲುಸ್ಸೆರಿಯ ಶಾಸಕ ಸಚಿನ್ ದೇವ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಆರ್ಯ ರಾಜೇಂದ್ರನ್ ಭಾರತದ ಕಿರಿಯ ಮೇಯರ್ ಆಗಿದ್ದು, ಸಚಿನ್ ದೇವ್ ಕೇರಳ ವಿಧಾನಸಭೆಯ ಕಿರಿಯ ಎಂಎಲ್ಎ ಆಗಿದ್ದಾರೆ.
ಈ ಜೋಡಿ ಕೇರಳದ ತಿರುವನಂತಪುರಂನಲ್ಲಿರುವ ಎಕೆಜಿ ಸೆಂಟರ್ನಲ್ಲಿ ತಮ್ಮ ಕುಟುಂಬದ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ಜೋಡಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್ವಾದಿ)ದ ವಿದ್ಯಾರ್ಥಿ ವಿಭಾಗದ ಬಾಲಸಂಘದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಪರಸ್ಪರ ಪರಿಚಯವಾಗಿದ್ದರು.