ಈ ಮೂಲಕ ಉತ್ತರಾಖಂಡವು ವೈದ್ಯಕೀಯ ಶಿಕ್ಷಣವನ್ನು ಹಿಂದಿಯಲ್ಲಿ ಅಳವಡಿಸು ತ್ತಿರುವ ಎರಡನೇ ರಾಜ್ಯ ಎಂದೆನಿಸಿ ಕೊಳ್ಳಲಿದೆ. ಮಧ್ಯ ಪ್ರದೇಶದಲ್ಲಿ ಮೊದಲ ಬಾರಿಗೆ ವೈದ್ಯಕೀಯ ಶಿಕ್ಷಣವನ್ನು ಹಿಂದಿಯಲ್ಲಿ ಅಳವಡಿಸಿಕೊಂಡಿತು.
ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯು ನಾಲ್ವರು ತಜ್ಞರನ್ನು ಒಳಗೊಂಡ ಸಮಿತಿ ಯನ್ನು ರಚಿಸಲಾಗಿದೆ. ಈ ಸಮಿತಿಯು ಮಧ್ಯ ಪ್ರದೇಶದ ಸರ್ಕಾರಿ ಕಾಲೇಜುಗಳ ಎಂಬಿಬಿಎಸ್ ಹಿಂದಿ ಪಠ್ಯಗಳನ್ನು ಅಭ್ಯಸಿಸಿ, ಬಳಿಕ ಉತ್ತರಾಖಂಡದ ಎಂಬಿಬಿಎಸ್ ಹಿಂದಿ ಹೊಸ ಪಠ್ಯ ರಚನೆಯ ಡ್ರಾಫ್ಟ್ಅನ್ನು ತಯಾರಿಸಲಿದೆ ಎಂದು ರಾವತ್ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಕ್ಟೋಬರ್ 16ರಂದು ಎಂಬಿಬಿಎಸ್ನ ಮೂರು ಹಿಂದಿ ವಿಷಯಗಳ ಪಠ್ಯ ಪುಸ್ತಕ ಗಳನ್ನು ಬಿಡುಗಡೆ ಮಾಡಿದ್ದಾರೆ.