Thursday, 12th December 2024

ಹಿಂದಿಯಲ್ಲಿ ಎಂಬಿಬಿಎಸ್ ಕಲಿಸಲು ಮ.ಪ್ರದೇಶ ಸರ್ಕಾರ ಮುಂದು

ಭೋಪಾಲ್: ಇದೇ ಮೊದಲ ಬಾರಿಗೆ ಎಂಬಿಬಿಎಸ್ ಅನ್ನು ಹಿಂದಿಯಲ್ಲಿ ಕಲಿಸಲು ಮಧ್ಯಪ್ರದೇಶ ಸರ್ಕಾರ ಮುಂದಾಗಿದೆ.

ಎಂಬಿಬಿಎಸ್ ವಿಷಯಗಳಾದ ಅಂಗರಚನಾಶಾಸ್ತ್ರ, ಶರೀರಶಾಸ್ತ್ರ ಮತ್ತು ಜೀವ ರಾಸಾಯನಿಕ ವಿಷಯಗಳು ಮಧ್ಯಪ್ರದೇಶದ ಎಲ್ಲಾ 13 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಿಂದಿಯಲ್ಲಿ ಕಲಿಸ ಲಾಗುವುದು.

ಭೋಪಾಲ್‌ನಲ್ಲಿ ಅನುವಾದಿತ ಎಂಬಿಬಿಎಸ್ ಪ್ರಥಮ ವರ್ಷದ ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ಪ್ರಾರಂಭಿಸಲಿದ್ದಾರೆ.

ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಹಿಂದಿಯಲ್ಲಿ ಕಲಿಯಲು ಮತ್ತು ಕಲಿಸಲು ಸಾಧ್ಯವಿಲ್ಲ ಎಂಬ ಗ್ರಹಿಕೆ ಬದಲಾಗುತ್ತದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಾಂಗ್, ಹಿಂದಿ ಪುಸ್ತಕಗಳು ಇಂಗ್ಲಿಷ್ ಜೊತೆಗೆ ಲಭ್ಯವಿರುತ್ತವೆ. ಆದರೆ ತಾಂತ್ರಿಕ ಪದಗಳು ಇಂಗ್ಲಿಷ್‌ನಲ್ಲಿ ಇರಲಿವೆ.

ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಪ್ರಾರಂಭಿಸಿದ ದೇಶದ ಮೊದಲ ರಾಜ್ಯ ಮಧ್ಯ ಪ್ರದೇಶ. ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್ ಅನ್ನು ಪ್ರಾಯೋಗಿಕ ಯೋಜನೆಯೂ ಗಾಂಧಿ ವೈದ್ಯಕೀಯ ಕಾಲೇಜಿನಿಂದ ಪ್ರಾರಂಭವಾಗಲಿದೆ.

ಇಂಗ್ಲಿಷ್‌ನಲ್ಲಿ ಉಪನ್ಯಾಸಗಳು ಮತ್ತು ಪುಸ್ತಕಗಳನ್ನು ಅರ್ಥಮಾಡಿಕೊಳ್ಳುವಲ್ಲಿ ತೊಂದರೆಗಳನ್ನು ಎದುರಿಸುವ ವಿದ್ಯಾರ್ಥಿಗಳು ಮಾತ್ರ ತಮ್ಮದೇ ಭಾಷೆಯಲ್ಲಿ ವಿಷಯ ವನ್ನು ಅರ್ಥ ಮಾಡಿಕೊಳ್ಳುವ ಸೌಲಭ್ಯವನ್ನು ಹೊಂದಿರುತ್ತಾರೆ ಎಂದು ಅವರು ಹೇಳಿದರು.