ನವದೆಹಲಿ: ಎಂ.ಬಿ.ಬಿ.ಎಸ್. ಪದವಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಹೊಸ ನಿಯಮ ಜಾರಿಗೆ ತಂದಿದೆ.
ವಿದ್ಯಾರ್ಥಿಗಳು ತಾವು ಕೋರ್ಸ್ ಗೆ ಪ್ರವೇಶ ಪಡೆದ ದಿನದಿಂದ 9 ವರ್ಷದೊಳಗೆ ಕೋರ್ಸ್ ಪೂರ್ಣಗೊಳಿಸಬೇಕು. ಮೊದಲ ವರ್ಷದ ಫೈನಲ್ ಪರೀಕ್ಷೆ ಉತ್ತೀರ್ಣವಾಗಲು ಗರಿಷ್ಠ ನಾಲ್ಕು ಅವಕಾಶ ನೀಡಲಾಗುತ್ತದೆ. ನೀಟ್ -ಯುಜಿ ಅರ್ಹತೆ ಆಧಾರದ ಮೇಲೆ ದೇಶದ ಎಲ್ಲಾ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಸಾಮಾನ್ಯ ಕೌನ್ಸೆಲಿಂಗ್ ಇರುತ್ತದೆ.
ಇಂಟರ್ನ್ ಶಿಪ್ ಪೂರ್ಣಗೊಳಿಸುವವರೆಗೆ ವಿದ್ಯಾರ್ಥಿ ಪದವಿ ಪಡೆದಿದ್ದಾರೆ ಎಂದು ಪರಿಗಣಿಸಲಾಗುವುದಿಲ್ಲ.
ಎಂಬಿಬಿಎಸ್ ಪರೀಕ್ಷೆ ಉತ್ತೀರ್ಣಕ್ಕೆ ಗರಿಷ್ಠ 9 ವರ್ಷ ಕಾಲಮಿತಿ ನಿಗದಿಪಡಿಸಲಾಗಿದೆ. ಪದವಿ ಹಂತ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದವರು 9 ವರ್ಷ ದೊಳಗೆ ಕೋರ್ಸ್ ಪೂರ್ಣಗೊಳಿಸಬೇಕು.
ಮೊದಲ ವರ್ಷದ ಎಂಬಿಬಿಎಸ್ ಪರೀಕ್ಷೆ ಅನುತ್ತೀರ್ಣರಾದವರೆಗೆ ನಾಲ್ಕು ಹೆಚ್ಚುವರಿ ಅವಕಾಶ ಸಿಗಲಿದೆ ಎಂದು ಹೇಳಲಾಗಿದೆ.