Wednesday, 11th December 2024

ಲೇಹ್ ಪಟ್ಟಣದಲ್ಲಿ ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರಧ್ವಜ ಧ್ವಜಾರೋಹಣ

ಲೇಹ್ : ರಾಷ್ಟ್ರವು ಶನಿವಾರ ಮಹಾತ್ಮಾ ಗಾಂಧಿ ಅವರಿಗೆ ಗೌರವ ಸಲ್ಲಿಸುತ್ತಿದ್ದಂತೆ, ಲೇಹ್ ನ ಅಧಿಕಾರಿಗಳು ಒಂದು ರೀತಿಯ ವಿಶ್ವ ದಾಖಲೆಯನ್ನು ನಿರ್ಮಿಸಿದರು.

ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಲೇಹ್ ಪಟ್ಟಣದಲ್ಲಿ ಧ್ವಜಾರೋಹಣ ಮಾಡಲಾ ಯಿತು. 225 ಅಡಿ ಉದ್ದ ಮತ್ತು 150 ಅಡಿ ಅಗಲದ ಧ್ವಜವೂ 1000 ಕೆ.ಜಿ ತೂಕವಿದೆ. ಪ್ರಸಾರ ಭಾರತಿ ನವೀಕರಣದ ಪ್ರಕಾರ, ಧ್ವಜವನ್ನು ಸೇನೆಯ 57 ಎಂಜಿನಿ ಯರ್ ರೆಜಿಮೆಂಟ್ ಸಿದ್ಧ ಪಡಿಸಿದೆ.  ಕಾರ್ಯಕ್ರಮವನ್ನು ಲಡಾಖ್ ಲೆಫ್ಟಿನೆಂಟ್ ಗವರ್ನರ್ ಆರ್.ಕೆ.ಮಾಥುರ್ ಉದ್ಘಾಟಿಸಿದರು.

ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ ಕೂಡ ಹಾಜರಿದ್ದರು. ಸೇನಾ ಮುಖ್ಯಸ್ಥರು ಲಡಾಖ್ ಗೆ 2 ದಿನಗಳ ಭೇಟಿಯಲ್ಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಿರಿಯ ಸೇನಾ ಅಧಿಕಾರಿಗಳೊಂದಿಗೆ ಹಲವರು ಭಾಗವಹಿಸಿದ್ದರು.

ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವಿಯಾ, ಗಾಂಧೀಜಿ ಅವರ ಜಯಂತಿಯಂದು ವಿಶ್ವದ ಅತಿದೊಡ್ಡ ಖಾದಿ ತಿರಂಗಾ ಲಡಾಖ್ ನ ಲೇಹ್ ನಲ್ಲಿ ಅನಾವರಣಗೊಂಡಿರುವುದು ಹೆಮ್ಮೆಯ ಕ್ಷಣವಾಗಿದೆ. ದೇಶವನ್ನು ಗೌರವಿಸುವ ಈ ಸನ್ನೆಗೆ ವಂದಿಸು ತ್ತೇನೆ. ಜೈ ಹಿಂದ್, ಜೈ ಭಾರತ್ ಎಂದಿದ್ದಾರೆ.