Friday, 22nd November 2024

ಅ.22ರಂದು ಮೆಗಾ ನೇಮಕಾತಿ ಅಭಿಯಾನಕ್ಕೆ ಮೋದಿ ಚಾಲನೆ

ವದೆಹಲಿ : ನುರಿತ ಭಾರತೀಯರಿಗೆ ಉದ್ಯೋಗ ಒದಗಿಸುವ ಪ್ರಯತ್ನದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅ.22 ರೋಜ್‌ಗಾರ್ ಮೇಳ ಎಂದು ಕರೆಯಲ್ಪಡುವ ಮೆಗಾ ನೇಮಕಾತಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ನಿರ್ದಿಷ್ಟ ಉದ್ಯೋಗ ಹುದ್ದೆಗಳ ಆಯ್ಕೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗುತ್ತದೆ ಮತ್ತು ನೇಮಕಾತಿ ಪ್ರಕ್ರಿಯೆ ತ್ವರಿತಗೊಳಿಸಲು ತಂತ್ರಜ್ಞಾನವನ್ನು ಸಕ್ರಿಯಗೊಳಿಸಲಾಗುತ್ತದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ತಿಳಿಸಿದೆ.

ಪ್ರಧಾನಮಂತ್ರಿಯವರು ದಿನದಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸ ಲಿದ್ದು, ಸಂಘಟಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ನೇಮಕಾತಿ ಅಭಿಯಾನ ದಿಂದ ಸುಮಾರು 10 ಲಕ್ಷ ಸಿಬ್ಬಂದಿಗೆ ಉದ್ಯೋಗ ದೊರೆಯಲಿದೆ. ಇದರ ಜೊತೆಗೆ ಸಮಾರಂಭದಲ್ಲಿ 75,000 ಹೊಸದಾಗಿ ನೇಮಕಗೊಂಡವರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗುವುದು.

ಹೊಸ ನೇಮಕಾತಿಗಳು ಭಾರತ ಸರ್ಕಾರದ 38 ಸಚಿವಾಲಯಗಳು/ಇಲಾಖೆಗಳಿಗೆ ಸೇರಿ ಕೊಳ್ಳುತ್ತವೆ. ನೇಮಕಗೊಂಡವರು ವಿವಿಧ ಹಂತಗಳಲ್ಲಿ ಸರ್ಕಾರಕ್ಕೆ ಸೇರುತ್ತಾರೆ.

ಗ್ರೂಪ್ – ಎ, ಗ್ರೂಪ್ – ಬಿ (ಗೆಜೆಟೆಡ್), ಗ್ರೂಪ್ – ಬಿ (ನಾನ್ ಗೆಜೆಟೆಡ್) ಮತ್ತು ಗ್ರೂಪ್ – ಸಿ. ನೇಮಕಾತಿಗಳನ್ನು ಮಾಡಲಾಗುತ್ತಿರುವ ಹುದ್ದೆಗಳಲ್ಲಿ ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿ, ಸಬ್ ಇನ್‌ಸ್ಪೆಕ್ಟರ್, ಕಾನ್ಸ್‌ಟೇಬಲ್, ಎಲ್‌ಡಿಸಿ, ಸ್ಟೆನೋ, ಪಿಎ, ಆದಾಯ ತೆರಿಗೆ ಇನ್ಸ್‌ಪೆಕ್ಟರ್‌ಗಳು, ಎಂಟಿಎಸ್, ಹೀಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇರಿಕೊಳ‍್ಳಲಿದ್ದಾರೆ ಎಂದು ಪಿಎಂಒ ಹೇಳಿಕೆ ತಿಳಿಸಿದೆ.

ಪ್ರಧಾನಿಯವರು ಅ.21 ರಂದು ಉತ್ತರಾಖಂಡಕ್ಕೆ ಭೇಟಿ ನೀಡಲಿದ್ದಾರೆ.