Thursday, 12th December 2024

ಮೆಹುಲ್ ಚೋಕ್ಸಿ ಜಾಮೀನು ಅರ್ಜಿ ವಜಾ

ನವದೆಹಲಿ : ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,500 ಕೋಟಿ ರೂ. ವಂಚನೆ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿದ್ದ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಜಾಮೀನು ಅರ್ಜಿಯನ್ನು ಡೊಮಿನಿಕಾ ಕೋರ್ಟ್ ವಜಾಗೊಳಿಸಿದೆ.

ಚೋಕ್ಸಿ ಅಕ್ರಮವಾಗಿ ಡೊಮಿನಿಕಾ ಪ್ರವೇಶಿಸಿದ ವಲಸಿಗ ಎಂದು ಡೊಮಿನಿಕಾ ಸರ್ಕಾರ ಹೇಳಿದ್ದು, ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಚೋಕ್ಸಿ ಮತ್ತೆ ಪರಾರಿಯಾಗುವ ಅಪಾಯ ಇರುವ ಕಾರಣ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಗುಜರಾತ್ ಮೂಲದ ಉದ್ಯಮಿ ಮೆಹುಲ್ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13 ಸಾವಿರ ಕೋಟಿ ರೂ. ವಂಚಿಸಿ ಭಾರತ ಬಿಟ್ಟು ವಿದೇಶಕ್ಕೆ ಪರಾರಿಯಾಗಿದ್ದ,

ಚೋಕ್ಸಿಗೆ ಆರೋಗ್ಯ ಸಮಸ್ಯೆಯಿದ್ದು, ಆತ ದೇಶ ಬಿಟ್ಟು ಹೋಗುವ ಯಾವುದೇ ಅವಕಾಶವಿಲ್ಲ. ಅದಲ್ಲದೆ ಆತ ಕೆರಿಬಿಯನ್ ನಾಡಿನ ನಾಗರಿಕನಾದ ಕಾರಣ ಆತನಿಗೆ ಜಾಮೀನು ನೀಡಬೇಕು ಎಂದು ಚೋಕ್ಸಿ ಪರ ವಕೀಲರು ಮನವಿ ಮಾಡಿದರು.