Thursday, 12th December 2024

180 ಕೋಟಿ ರೂ.ಗಳ ಮೆಥಾಂಫೆಟಮೈನ್ ಜಪ್ತಿ

ವದೆಹಲಿ: ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಶ್ರೀಲಂಕಾಕ್ಕೆ ಸಾಗಿಸಲು ಉದ್ದೇಶಿಸಿದ್ದ 180 ಕೋಟಿ ರೂ.ಗಳ ಮೆಥಾಂಫೆಟಮೈನ್ ಅನ್ನು ಜಪ್ತಿ ಮಾಡಿದೆ.

ಮಧುರೈ ರೈಲ್ವೆ ನಿಲ್ದಾಣದಲ್ಲಿ ರೈಲು ಪ್ರಯಾಣಿಕನಿಂದ ಮೇಲೆ 30 ಕೆಜಿ ಮತ್ತು ಚೆನ್ನೈನ ಡಂಪ್ ಯಾರ್ಡ್ನಿಂದ ಹೆಚ್ಚುವರಿ 6 ಕೆಜಿ ವಶಪಡಿಸಿಕೊಳ್ಳ ಲಾಗಿದೆ.

ಮಧುರೈಗೆ ಹೋಗುವ ಪೊಥಿಗೈ ಎಕ್ಸ್ಪ್ರೆಸ್ ರೈಲಿನಲ್ಲಿ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮೆಥಾಂಫೆಟಮೈನ್ ಹೊಂದಿರುವ 15 ಪ್ಯಾಕೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆಯ ನಂತರ ಚೆನ್ನೈನಲ್ಲಿರುವ ಶಂಕಿತನ ನಿವಾಸದಲ್ಲಿ ಹೆಚ್ಚುವರಿ ಪ್ಯಾಕೆಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಅವರ ಮನೆಯನ್ನು ಶೋಧ ನಡೆಸಲಾಗಿತ್ತು ಅವರ ಪತ್ನಿ ಡ್ರಗ್ಸ್ ಪ್ಯಾಕೆಟ್ ಗಳನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ ಮತ್ತು ಕಸವನ್ನು ಈಗಾಗಲೇ ಕೊಂಡುಂಗೈಯೂರ್ ಡಂಪ್ಯಾರ್ಡ್ಗೆ ತೆಗೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ” ಎಂದು ಪ್ರಕಟಣೆ ತಿಳಿಸಿದೆ.

ಶಂಕಿತನು ಕರಾವಳಿ ಮಾರ್ಗದ ಮೂಲಕ ಶ್ರೀಲಂಕಾಕ್ಕೆ ನಿಷಿದ್ಧ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ಎಂದು ಪ್ರಾಥಮಿಕ ತನಿಖೆ ಯಿಂದ ತಿಳಿದುಬಂದಿದೆ. ತನಿಖೆ ಆರಂಭವಾಗುತ್ತಿದ್ದಂತೆ ಶಂಕಿತ ಮತ್ತು ಆತನ ಪತ್ನಿ ಇಬ್ಬರನ್ನೂ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.