Wednesday, 30th October 2024

Microplastic: ಮೈಕ್ರೋಪ್ಲಾಸ್ಟಿಕ್ ಸೇವನೆ ತಪ್ಪಿಸಲು ಈ ಏಳು ಅಂಶಗಳನ್ನು ಪಾಲಿಸಿ

Microplastic

ಪ್ಲಾಸ್ಟಿಕ್‌‌ನ (plastic) ಅತ್ಯಂತ ಸೂಕ್ಷ್ಮ ಕಣಗಳನ್ನು ಮೈಕ್ರೋಪ್ಲಾಸ್ಟಿಕ್ (Microplastic) ಎನ್ನಲಾಗುತ್ತದೆ. ಇದು ಎಷ್ಟೋ ಬಾರಿ ನೀರು, ಆಹಾರದ ಮೂಲಕ ನಮ್ಮ ದೇಹವನ್ನು ಸೇರುತ್ತದೆ. ಇದರಿಂದ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಮೈಕ್ರೋಪ್ಲಾಸ್ಟಿಕ್ ಸೇವನೆಯನ್ನು ಕಡಿಮೆ ಮಾಡಲು ಹಲವು ದಾರಿಗಳಿವೆ. ಇದರಲ್ಲಿ ಬಹುತೇಕ ಅಂಶಗಳನ್ನು ನಾವು ಮನೆಯಲ್ಲೇ ಅಳವಡಿಸಿಕೊಳ್ಳಬಹುದಾಗಿದೆ.

ಮನೆಯಲ್ಲೇ ಮೈಕ್ರೋಪ್ಲಾಸ್ಟಿಕ್ ಸೇವನೆಯನ್ನು ಕಡಿಮೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ಮಾತ್ರವಲ್ಲ ಮನೆ ಮಂದಿಯ ಆರೋಗ್ಯವನ್ನೂ ಕಾಪಾಡಬಹುದು.

ಮೈಕ್ರೋಪ್ಲಾಸ್ಟಿಕ್ಸ್ 5 ಎಂಎಂಗಿಂತಲೂ ಕಡಿಮೆ ಗಾತ್ರವನ್ನು ಹೊಂದಿದೆ. ಈ ಸಣ್ಣ ಪ್ಲಾಸ್ಟಿಕ್ ಕಣಗಳು ನಮ್ಮ ಪರಿಸರ ಮತ್ತು ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಆಹಾರ, ನೀರು, ಗಾಳಿಯ ಮೂಲಕ ನಮ್ಮ ದೇಹವನ್ನು ಸೇರುವ ಈ ಸಣ್ಣ ಪ್ಲಾಸ್ಟಿಕ್ ಕಣಗಳು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಮನೆಯಲ್ಲೇ ಅವುಗಳ ಬಳಕೆಯನ್ನು ಕಡಿಮೆ ಮಾಡುವುದು ಒಳ್ಳೆಯದು.

ನಾವು ಬಳಸುವ, ಖರೀದಿಸುವ ಮತ್ತು ಬಳಕೆಯ ಅಭ್ಯಾಸಗಳ ಬಗ್ಗೆ ಪ್ರಜ್ಞಾಪೂರ್ವಕ ಆಯ್ಕೆಗಳನ್ನು ಮಾಡುವ ಮೂಲಕ ನಾವು ಮೈಕ್ರೋಪ್ಲಾಸ್ಟಿಕ್ ಸೇವನೆಯನ್ನು ಕಡಿಮೆ ಮಾಡಿ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಬಹುದಾಗಿದೆ.

Microplastic

ನೈಸರ್ಗಿಕ ವಸ್ತುಗಳನ್ನು ಆಯ್ಕೆ ಮಾಡಿ

ಮೈಕ್ರೊಪ್ಲಾಸ್ಟಿಕ್‌ಗಳನ್ನು ಹೊಂದಿರುವ ಕೃತಕ ವಸ್ತುಗಳ ಬದಲಿಗೆ ಹತ್ತಿ, ಉಣ್ಣೆ ಅಥವಾ ಲಿನಿನ್‌ನಂತಹ ನೈಸರ್ಗಿಕ ವಸ್ತುಗಳಿಂದ ತಯಾರಿ ಮಾಡಿರುವ ಬಟ್ಟೆ ಮತ್ತು ಜವಳಿಗಳನ್ನು ಆಯ್ಕೆ ಮಾಡಿಕೊಳ್ಳಿ. ಇದು ಚರ್ಮದ ಆರೋಗ್ಯಕ್ಕೂ ಉತ್ತಮ.

Microplastic

ಮೈಕ್ರೋಫೈಬರ್ ಫಿಲ್ಟರ್ ಬಳಸಿ

ಬಟ್ಟೆ ತೊಳೆಯುವ ಯಂತ್ರಗಳಲ್ಲಿ ಮೈಕ್ರೋಫೈಬರ್ ಫಿಲ್ಟರ್ ಗಳನ್ನು ಅಳವಡಿಸಿ. ಈ ಫಿಲ್ಟರ್ ಗಳು ನೀರಿನಲ್ಲಿರುವ ಮೈಕ್ರೋ ಪ್ಲಾಸ್ಟಿಕ್ ಗಳನ್ನು ಸಂಗ್ರಹಿಸುತ್ತವೆ ಮತ್ತು ಶುದ್ಧವಾದ ನೀರು ಯಂತ್ರದೊಳಗೆ ಹೋಗುವಂತೆ ಮಾಡುತ್ತದೆ.

Microplastic

ಪ್ಲಾಸ್ಟಿಕ್ ಪಾತ್ರೆ ಬಳಸಬೇಡಿ

ಆಹಾರಗಳನ್ನು ಸಂಗ್ರಹಿಸಿಡಲು ಅಥವಾ ತಿನ್ನಲು ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸಬೇಡಿ. ಗಾಜು ಅಥವಾ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳನ್ನೇ ಆಯ್ಕೆ ಮಾಡಿ.

Microplastic

ಸಂಸ್ಕರಿಸಿದ ಆಹಾರದಿಂದ ದೂರವಿರಿ

ಪ್ಯಾಕ್ ಮಾಡಲಾದ ಮತ್ತು ಸಂಸ್ಕರಿಸಿದ ಆಹಾರಗಳ ಬಳಕೆಯನ್ನು ಕಡಿಮೆ ಮಾಡಿ. ಯಾಕೆಂದರೆ ಇವುಗಳಲ್ಲಿ ಸಾಮಾನ್ಯವಾಗಿ ಪ್ಯಾಕೇಜಿಂಗ್‌ ವೇಳೆ ಮೈಕ್ರೋಪ್ಲಾಸ್ಟಿಕ್‌ ಕಣಗಳು ಆಹಾರದಲ್ಲಿ ಸೇರುವ ಸಾಧ್ಯತೆ ಇರುತ್ತದೆ.

Microplastic

ಫಿಲ್ಟರ್ ಮಾಡಿದ ನೀರು ಸೇವಿಸಿ

ಟ್ಯಾಪ್ ಗಳಲ್ಲಿ ಬರುವ ನೀರಿನಲ್ಲಿ ಮೈಕ್ರೋಪ್ಲಾಸ್ಟಿಕ್ ಸೇರಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದಕ್ಕಾಗಿ ಉತ್ತಮ ಗುಣಮಟ್ಟದ ವಾಟರ್ ಫಿಲ್ಟರ್ ಅನ್ನು ಬಳಸಿ. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ಸೇವಿಸಬೇಡಿ.

Microplastic

ಉತ್ಪನ್ನಗಳ ಆಯ್ಕೆ ಬಗ್ಗೆ ಎಚ್ಚರ

ಪ್ಲಾಸ್ಟಿಕ್ ಡಬ್ಬಗಳಲ್ಲಿ ಸಂಗ್ರಹಿಸಿಡುವ ವೈಯಕ್ತಿಕ ಆರೈಕೆ ಉತ್ಪನ್ನಗಳನ್ನು ಖರೀದಿ ಮಾಡುವಾಗ ಅವುಗಳ ಲೇಬಲ್ ಅನ್ನು ಪರಿಶೀಲಿಸಿ. ಮೈಕ್ರೊಪ್ಲಾಸ್ಟಿಕ್‌ಗಳನ್ನು ಒಳಗೊಂಡಿರುವ ಅದರಲ್ಲೂ ಮುಖ್ಯವಾಗಿ ಎಫ್‌ಫೋಲಿಯೇಟಿಂಗ್ ಸ್ಕ್ರಬ್‌ಗಳ ಬಳಕೆ ಮಾಡಬೇಡಿ.

Coconut Oil Side Effect: ತೆಂಗಿನೆಣ್ಣೆಯನ್ನು ಮುಖಕ್ಕೆ ಹಚ್ಚುತ್ತಿದ್ದಿರಾ? ಹಾಗಾದ್ರೆ ಇದನ್ನು ತಪ್ಪದೇ ಓದಿ!

Microplastic

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ

ಮರುಬಳಕೆ ಮಾಡಬಹುದಾದ ಚೀಲ, ಸ್ಟ್ರಾ ಮತ್ತು ಪಾತ್ರೆಗಳನ್ನು ಆರಿಸುವ ಮೂಲಕ ಮನೆಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ಕಡಿಮೆ ಮಾಡಿ. ಇದು ಒಟ್ಟಾರೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.