Sunday, 10th November 2024

ಎಲ್‌ಓಸಿ ಬಳಿ ಮೂವರು ಉಗ್ರರ ಹತ್ಯೆ

ಜಮ್ಮು: ಜಿಲ್ಲೆಯ ಅಖ್ನೂರ್‌ನ ಖೌರ್ ಸೆಕ್ಟರ್‌ ಬಳಿಯ ಗಡಿ ನಿಯಂತ್ರಣ ರೇಖೆ ಮೂಲಕ ಭಾರತದ ಭೂ ಪ್ರದೇಶದತ್ತ ನುಸುಳಲು ಪ್ರಯತ್ನಿಸುತ್ತಿದ್ದ ಶಸ್ತ್ರಸಜ್ಜಿತ ಮೂವರು ಉಗ್ರರನ್ನ ಭಾರತೀಯ ಸೈನಿಕರು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ.

ಖೌರ್ ಸೆಕ್ಟರ್‌ನಲ್ಲಿನ ನಿಯಂತ್ರಣ ರೇಖೆಯ ಮೂಲಕ ಭಾರತದ ಕಡೆಗೆ ನುಸುಳಲು ಯತ್ನಿಸುತ್ತಿದ್ದ ಐವರು ಶಸ್ತ್ರಸಜ್ಜಿತ ಉಗ್ರರನ್ನ ಭಾರತೀಯ ಯೋಧರು ತಡೆಯಲು ಪ್ರಯತ್ನಿಸಿದ್ದಾರೆ. ಈ ಮಧ್ಯೆ, ಪಾಕಿಸ್ತಾನ ಸೇನಾಪಡೆಯವರು ಉಗ್ರರನ್ನ ಭಾರತದ ಭೂ ಪ್ರದೇಶದತ್ತ ಓಡಿಸುವುದಕ್ಕಾಗಿ ಖೌರ್ ಸೆಕ್ಟರ್‌ನ ಜೋಗ್ಮಾ ಎಂಬ ಹಳ್ಳಿಯ ಮೇಲೆ ಭಾರಿ ಶೆಲ್ ದಾಳಿ ನಡೆಸಿದರು. ಈ ದಾಳಿಯಲ್ಲಿ ನಾಲ್ವರು ಭಾರತೀಯ ಸೈನಿಕರು ಗಾಯಗೊಂಡರು. ಇದಕ್ಕೆ ಪ್ರತಿಕಾರವಾಗಿ ಭಾರತೀಯ ಸೈನಿಕರು, ಗಡಿ ನಿಯಂತ್ರಣ ರೇಖೆ ಯಿಂದ ಒಳ ನುಸುಳುತ್ತಿದ್ದ ಮೂವರು ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗ್ತಿದೆ.

ಇನ್ನುಈ ಘಟನೆಯಲ್ಲಿ ಗಾಯಗೊಂಡ ನಾಲ್ವರು ಸೈನಿಕರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.