ಮೀನು ಮತ್ತು ಹಾಲನ್ನು(Milk and Fish) ಒಟ್ಟಿಗೆ ಸೇವಿಸಬಾರದು ಎಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ. ಮೀನು ಮತ್ತು ಹಾಲನ್ನು ಒಟ್ಟಿಗೆ ಸೇವಿಸಿದರೆ, ಅದು ಚರ್ಮರೋಗಕ್ಕೆ ಕಾರಣವಾಗುತ್ತದೆ. ಅಂದರೆ ಚರ್ಮದಲ್ಲಿ ಬಿಳಿ ಕಲೆಗಳು ಉಂಟಾಗುತ್ತವೆ ಎಂದು ಕೆಲವರು ಹೇಳುತ್ತಾರೆ. ಆದರೆ ವಿಜ್ಞಾನ ಹಾಗೂ ಆಯುರ್ವೇದ ಈ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.
ವೈಜ್ಞಾನಿಕ ದೃಷ್ಟಿಕೋನದಿಂದ ಹೇಳುವುದಾದರೆ ಈ ಬಗ್ಗೆ ಯಾವುದೇ ದೃಢವಾದ ತೀರ್ಮಾನವಿಲ್ಲ. ಆದರೆ ಆಯುರ್ವೇದದಲ್ಲಿ ಹಾಲು ಮತ್ತು ಮೀನನ್ನು ಒಟ್ಟಿಗೆ ತಿನ್ನುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಮೀನಿನಲ್ಲಿ ಸಾಕಷ್ಟು ಪ್ರೋಟೀನ್, ಅನೇಕ ರೀತಿಯ ಜೀವಸತ್ವಗಳು, ಒಮೆಗಾ 3 ಕೊಬ್ಬಿನಾಮ್ಲಗಳು ಇತ್ಯಾದಿಗಳಿವೆ, ಆದರೆ ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ಅಯೋಡಿನ್, ಪೊಟ್ಯಾಸಿಯಮ್, ರಂಜಕ ಇತ್ಯಾದಿಗಳು ಸಮೃದ್ಧವಾಗಿವೆ.
ಹಾಲು-ಮೀನು ಒಟ್ಟಿಗೆ ತಿನ್ನುವ ಬಗ್ಗೆ ಆಯುರ್ವೇದ ಹೇಳುವುದೇನು?
ಆಯುರ್ವೇದದ ಪ್ರಕಾರ ಮೀನು ಮತ್ತು ಹಾಲು ಎರಡೂ ಪ್ರೋಟೀನ್‌ನಿಂದ ತುಂಬಿರುತ್ತವೆ, ಆದರೆ ಎರಡರಲ್ಲೂ ಪ್ರೋಟೀನ್ ವಿಭಿನ್ನವಾಗಿದೆ. ಆದ್ದರಿಂದ, ಮೀನು ಮತ್ತು ಹಾಲನ್ನು ಒಟ್ಟಿಗೆ ತಿನ್ನುವುದನ್ನು ಆಯುರ್ವೇದದಲ್ಲಿ ನಿಷೇಧಿಸಲಾಗಿದೆ.ಆಯುರ್ವೇದದಲ್ಲಿ ಯಾವುದೇ ರೋಗಕ್ಕೆ ಚಿಕಿತ್ಸೆ ನೀಡುವಾಗ ಮಾಂಸಹಾರ ತ್ಯಜಿಸುವಂತೆ ಸಲಹೆ ನೀಡಲಾಗುತ್ತದೆ. ಆಯುರ್ವೇದದಲ್ಲಿ ಮೀನು ಮತ್ತು ಹಾಲನ್ನು ಒಟ್ಟಿಗೆ ಸೇವಿಸಿದರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ ಬಿಳಿ ಕಲೆಗಳು ಮೂಡುತ್ತವೆ ಎಂದು ಹೇಳಲಾಗಿಲ್ಲ.
ಇದನ್ನೂ ಓದಿ: ಮನೆಯೊಂದರ ಬೆಡ್‍ರೂಂನಲ್ಲಿ ಜೋಡಿ ಹಾವುಗಳ ಸರಸ; ವಿಡಿಯೊ ವೈರಲ್
ಹಾಲು-ಮೀನು ಒಟ್ಟಿಗೆ ತಿನ್ನುವ ಬಗ್ಗೆ ವಿಜ್ಞಾನ ಹೇಳುವುದೇನು?
ಮೀನು ಮತ್ತು ಹಾಲನ್ನು ಒಟ್ಟಿಗೆ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತಾಗಿರುವ ಯಾವುದೇ ವೈಜ್ಞಾನಿಕ ಅಧ್ಯಯನವಿಲ್ಲ. ವಿಜ್ಞಾನದ ಪ್ರಕಾರ, ನೀವು ಈಗಾಗಲೇ ಮೀನು ಅಥವಾ ಹಾಲಿಗೆ ಸಂಬಂಧಿಸಿದ ಅಲರ್ಜಿ ಹೊಂದಿದ್ದರೆ, ಅದು ಸಮಸ್ಯೆಗಳನ್ನು ಉಂಟುಮಾಡಬಹುದು. ಸತ್ಯವೆಂದರೆ, ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ, ಜನರು ತುಂಬಾ ಅನಾರೋಗ್ಯಕ್ಕೆ ಒಳಗಾದಾಗ ಮತ್ತು ತುಂಬಾ ದುರ್ಬಲರಾದಾಗ,ತ್ವರಿತವಾಗಿ ಚೇತರಿಸಿಕೊಳ್ಳಲು ಹಾಲು ಮತ್ತು ಮೀನುಗಳನ್ನು ಒಟ್ಟಿಗೆ ನೀಡುತ್ತಾರೆ. ಆದ್ದರಿಂದ ನೀವು ಮೀನು ಮತ್ತು ಹಾಲನ್ನು ಒಟ್ಟಿಗೆ ಸೇವಿಸಲು ಬಯಸಿದ್ದರೆ ಈ ಎರಡರಿಂದ ನಿಮಗೆ ಅಲರ್ಜಿ ಇಲ್ಲದಿದ್ದರೆ ಅದನ್ನು ಸೇವಿಸುವುದರಿಂದ ಯಾವುದೇ ಹಾನಿಯಿಲ್ಲ. ಆದರೆ ಈ ಆಹಾರಗಳನ್ನು ಒಟ್ಟಿಗೆ ತಿನ್ನುವುದು ಸಮಸ್ಯೆಗಳನ್ನು ಉಂಟುಮಾಡಿದರೆ, ಅದನ್ನು ತಿನ್ನದಿರುವುದೇ ಒಳ್ಳೆಯದು ಎನ್ನಲಾಗಿದೆ.