ಹೈದರಾಬಾದ್: ಕೋರೊನಾಗೆ ಕೋವ್ಯಾಕ್ಸಿನ್ ಲಸಿಕೆ ತಯಾರಿಸಿರುವ ಭಾರತ್ ಬಯೋಟೆಕ್ ಸಂಸ್ಥೆ ಲಸಿಕೆಗೆ ಸಂಬಂಧಿಸಿದ ಫ್ಯಾಕ್ಟ್ ಶೀಟ್ ನಲ್ಲಿ ಜ್ವರ, ಗರ್ಭಿಣಿ, ಹಾಲುಣಿಸುವ ತಾಯಂದಿರು, ರಕ್ತಸ್ರಾವ, ರಕ್ತ ತೆಳ್ಳಗಾಗಿಸುವುದಕ್ಕೆ ಔಷಧ ಗಳನ್ನು ಪಡೆಯುತ್ತಿರುವವರು ಲಸಿಕೆ ಪಡೆಯಬಾರದು ಎಂದು ಹೇಳಿದೆ.
ಅಲರ್ಜಿ ಇದ್ದಲ್ಲಿ, ಜ್ವರ, ರಕ್ತಸ್ರಾವ ಸಮಸ್ಯೆ, ಬ್ಲಡ್ ಥಿನ್ನರ್ ಗಳನ್ನು ಬಳಸು ತ್ತಿದ್ದರೆ, ರೋಗನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಔಷಧ ಗಳನ್ನು ತೆಗೆದುಕೊಳ್ಳುತ್ತಿರುವವರು, ಗರ್ಭಿಣಿಯರು, ಹಾಲುಣಿಸುತ್ತಿರುವ ಮಹಿಳೆಯರು, ಬೇರೆ ಕೋವಿಡ್-19 ಲಸಿಕೆ ಪಡೆದವರು, ಅಥವಾ ಇನ್ನಿತರ ಯಾವುದೇ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿರುವವರು ಕೋವ್ಯಾಕ್ಸಿನ್ ಲಸಿಕೆ ಪಡೆಯುವಂತಿಲ್ಲ ಎಂದು ಭಾರತ್ ಬಯೋಟೆಕ್ ಸಂಸ್ಥೆ ಸ್ಪಷ್ಟವಾಗಿ ತಿಳಿಸಿದೆ.