Thursday, 12th December 2024

ಕಳಪೆ ಹೆದ್ದಾರಿ ನಿರ್ಮಾಣ: ಕ್ಷಮೆಯಾಚಿಸಿದ ಸಚಿವ ನಿತಿನ್ ಗಡ್ಕರಿ

ಭೋಪಾಲ್: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಧ್ಯಪ್ರದೇಶದಲ್ಲಿ ಹೆದ್ದಾರಿ ಯನ್ನು ಕಳಪೆಯಾಗಿ ನಿರ್ಮಿಸಿದ್ದಕ್ಕಾಗಿ ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ ಹಾಗೂ ಯೋಜನೆಗೆ ಹೊಸ ಗುತ್ತಿಗೆಗೆ ಆದೇಶ ನೀಡಿದ್ದಾರೆ.

“ನನಗೆ ದುಃಖ ಹಾಗೂ ನೋವಾಗಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸಲು ನಾನು ಹಿಂಜರಿ ಯುವುದಿಲ್ಲ. ಮಂಡ್ಲಾದಿಂದ ಜಬಲ್‌ಪುರ ಹೆದ್ದಾರಿಯಲ್ಲಿ, ಬರೇಲಾದಿಂದ ಮಂಡ್ಲಾವರೆಗಿನ 63 ಕಿ.ಮೀ ಉದ್ದದ ಸುಮಾರು ₹ 400 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆ ಬಗ್ಗೆ ನನಗೆ ತೃಪ್ತಿ ಇಲ್ಲ” ಎಂದು ರಸ್ತೆ ಸಾರಿಗೆ ಸಚಿವರು ಹೇಳಿದರು.

ಸಚಿವರ ಮಾತನ್ನು ಕೇಳಿದ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು. ಮಧ್ಯಪ್ರದೇಶ ಮುಖ್ಯ ಮಂತ್ರಿ ಶಿವರಾಜ್ ಚೌಹಾಣ್ ವೇದಿಕೆ ಯಲ್ಲಿದ್ದರು.

ಪರಸ್ಪರ ಒಮ್ಮತದ ನಂತರ ಯೋಜನೆಯನ್ನು ಸ್ಥಗಿತಗೊಳಿಸಿ ಹಾಗೂ ಹಳೆಯ ಕೆಲಸವನ್ನು ಸರಿಪಡಿಸಿ, ಹೊಸ ಟೆಂಡರ್ ಕರೆಯಿರಿ ಹಾಗೂ ಶೀಘ್ರದಲ್ಲೇ ಉತ್ತಮ ರಸ್ತೆಯನ್ನು ನಿರ್ಮಿಸಿ ಎಂದು ಅಧಿಕಾರಿಗಳಿಗೆ ತಿಳಿಸಿರುವೆ. ನೀವು ಇಲ್ಲಿಯವರೆಗೆ ಏನು ಎದುರಿಸಿದ್ದೀರೋ, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ” ಎಂದು ಗಡ್ಕರಿ ಹೇಳಿದರು.