Sunday, 15th December 2024

ಓಡೋಡಿ ಹೋಗಿ ನಾಮಪತ್ರ ಸಲ್ಲಿಸಿದ ಸಚಿವ ಉಪೇಂದ್ರ ತಿವಾರಿ

ಲಕ್ನೊ: ರಾಜ್ಯ ಕ್ರೀಡಾ ಸಚಿವ ಉಪೇಂದ್ರ ತಿವಾರಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬಲ್ಲಿಯಾ ಕಲೆಕ್ಟರೇಟ್‌ನಲ್ಲಿರುವ ಚುನಾವಣಾಧಿಕಾರಿ ಕಚೇರಿಯತ್ತ ಓಡೋಡಿ ಹೋಗಿ ನಾಮಪತ್ರ ಸಲ್ಲಿಸಿದರು.

ತಿವಾರಿ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಜಿಲ್ಲೆಯ ಫೆಫ್ನಾ ಅಸೆಂಬ್ಲಿ ಸ್ಥಾನದಿಂದ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ.

ತಿವಾರಿ ತಲೆಗೆ ಕೇಸರಿ ಬಟ್ಟೆ ಹಾಗೂ ಕುತ್ತಿಗೆ ತುಂಬಾ ಹಾರವನ್ನು ಧರಿಸಿ ಬಲ್ಲಿಯಾ ಕಲೆಕ್ಟರೇಟ್ ಕಚೇರಿಯ ಮುಖ್ಯ ಗೇಟ್‌ನಿಂದ ನಾಮನಿರ್ದೇಶನ ಸಭಾಂಗಣಕ್ಕೆ ಓಡುತ್ತಿರುವುದನ್ನು ಕಾಣಬಹುದು.

ಫೆಫ್ನಾ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಫೆ.11 ಕೊನೆಯ ದಿನವಾಗಿದ್ದರೂ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕಿತ್ತು. ಹೀಗಾಗಿ ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲು ತಿವಾರಿ ಓಡಿಕೊಂಡು ಹೋದರು. ತಿವಾರಿಯ ಜೊತೆಗೆ ಅವರ ಭದ್ರತಾ ಸಿಬ್ಬಂದಿ ಕೂಡ ಅವರ ಜೊತೆ ಓಡುತ್ತಿರುವುದು ಕಂಡುಬಂದಿದೆ.