Friday, 22nd November 2024

Missing Boys: ಮಿಸ್ಸಿಂಗ್‌ ಹುಡುಗರ ಪತ್ತೆಗೆ ನೆರವಾಯ್ತು 500 ಸಿಸಿಟಿವಿ ಕ್ಯಾಮೆರಾ, ಏಳು ಪೊಲೀಸರ ತಂಡ


ನೋಯ್ಡಾ: ಕಡಿಮೆ ಗ್ರೇಡ್‌ (Low Marks) ಪಡೆದಿದ್ದಕ್ಕೆ, ಪಾಲಕರ ಬೈಗುಳಕ್ಕೆ ಹೆದರಿ ಪಲಾಯನ ಮಾಡಿದ್ದ ಇಬ್ಬರು ಶಾಲಾ ಹುಡುಗರ ಸುಮಾರು ಏಳು ಪೊಲೀಸರ ತಂಡ ಹಾಗೂ 500 ಸಿಸಿಟಿವಿ ಕ್ಯಾಮೆರಾ ಕೆಲಸ ಮಾಡಿವೆ.

ಸೆಕ್ಟರ್‌ 56ರಲ್ಲಿರುವ ಉತ್ತರಾಖಂಡ್‌ ಪಬ್ಲಿಕ್‌ ಶಾಲೆಯ(Uttarakhand Public School) ವಿದ್ಯಾರ್ಥಿಗಳಾದ ಆರ್ಯನ್‌ ಚೌರಾಶಿಯಾ ಹಾಗೂ ನಿತಿನ್‌ ಧ್ಯಾನ್‌ ಮಿಸ್ಸಿಂಗ್‌ ಆದವರು.

ಟೆಸ್ಟ್‌ ಪೇಪರುಗಳಿಗೆ ಪಾಲಕರ ಸಹಿ ಹಾಕಿ ತರಲು ಹೇಳಿದ್ದು, ಮರುದಿನ ಮರಳಿಸುವಂತೆ ಸೂಚಿಸಿದ್ದರು. ಕಳಪೆ ಅಂಕಕ್ಕೆ ಮೊದಲೇ ಆತಂಕದಲ್ಲಿದ್ದ, ಪಾಲಕರು ಬೈಯ್ಯಬಹುದೆಂದು ಹೆದರಿ, ಶಾಲೆ ಸಮಯ ಮುಕ್ತಾಯವಾದ ಬೆನ್ನಲ್ಲೇ ಮನೆಗೂ ಮರಳದೆ ಪಲಾಯನ ಮಾಡಿದ್ದರು.

ಶಾಲೆಯಿಂದ ಹೊರಟ ಮಕ್ಕಳು ಮನೆಗೆ ಬರದಿದ್ದನ್ನು ಕಂಡು, ಪಾಲಕರು ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸ್‌ ಕೂಡಲೇ ತನಿಖೆ ಆರಂಭಿಸಿದೆ. ಈ ಕಾರ್ಯಾಚರಣೆಗಾಗಿ ಏಳು ಪೊಲೀಸ್‌ ತಂಡ ಹಾಗೂ ಶಾಲೆಯ ಅಕ್ಕಪಕ್ಕದಲ್ಲಿದ್ದ ಸುಮಾರು 500 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ಶಾಲೆಯ ಕ್ಯಾಮೆರಾ ಬಳಿ ಮಕ್ಕಳು ಕಂಡುಬಂದಿದ್ದಾರೆ.

ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಸಿವಿಲ್‌ ಡ್ರೆಸ್‌ ನಲ್ಲಿ ಕಾರ್ಯಾಚರಣೆ ನಡಸಿದ್ದು, ಅಂತಿಮವಾಗಿ 40 ಕಿ.ಮೀ ದೂರದಲ್ಲಿ ದೆಹಲಿಯ ಆನಂದ್‌ ವಿಹಾರ (Anand Vihar) ಎಂಬಲ್ಲಿ ಮಕ್ಕಳ ಪತ್ತೆಯಾಗಿದೆ

ಈ ಕಾರ್ಯಾಚರಣೆಯ ಯಶಸ್ಸಿಗಾಗಿ ಪಾಲಕರು ಪೊಲೀಸರನ್ನು ಶ್ಲಾಘಿಸಿದ್ದಾರೆ.