67 ವಿದ್ಯಾರ್ಥಿಗಳಲ್ಲಿ – 48 ಹುಡುಗರು ಮತ್ತು 19 ಹುಡುಗಿಯರಿಗೆ ಸೋಂಕು ತಗುಲಿದ್ದು, 16 ವಿದ್ಯಾರ್ಥಿಗಳನ್ನು ಹೋಮ್ ಕ್ವಾರಂಟೈನ್ಗೆ ಕಳುಹಿಸಲಾಗಿದೆ. ಉಳಿದವರನ್ನು ಎರಡು ಪ್ರತ್ಯೇಕ ಹಾಸ್ಟೆಲ್ಗಳಲ್ಲಿ ಪ್ರತ್ಯೇಕಿಸಲಾಗಿದೆ. ಸೋಂಕಿಗೆ ಒಳಗಾಗದ ಮತ್ತು ನೆಗೆಟಿವ್ ಪರೀಕ್ಷೆ ಮಾಡಿದ ಇತರ ಎಲ್ಲ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಖಾಲಿ ಮಾಡಲು ತಿಳಿಸಲಾಗಿದೆ. ಡಿಸೆಂಬರ್ 30 ರಂದು ಮುನ್ನೆಚ್ಚರಿಕೆ ಕ್ರಮವಾಗಿ 169 ವಿದ್ಯಾರ್ಥಿಗಳನ್ನು ಪರೀಕ್ಷಿಸಲು ಕಾಲೇಜ್ ನಿರ್ಧರಿಸಿತು.
ಜನವರಿ 2 ರಂದು 250 ಮತ್ತು 3 ರಂದು 797 ವಿದ್ಯಾರ್ಥಿಗಳನ್ನ ಪರೀಕ್ಷೆಗೆ ಒಳಪಡಿಸಲಾಯಿತು. ವಿದ್ಯಾರ್ಥಿಗಳನ್ನು ಪ್ರತ್ಯೇಕ ಕಟ್ಟಡದಲ್ಲಿಟ್ಟು, ಪ್ರತ್ಯೇಕ ಸೌಲಭ್ಯ ಗಳೊಂದಿಗೆ ಮಾನಿಟರ್ ಮಾಡಲಾಗುತ್ತಿದೆ.