Sunday, 15th December 2024

ಪಶ್ಚಿಮ ಬಂಗಾಳ: ಬೃಹತ್ ಸಮಾವೇಶದಲ್ಲಿ ಬಿಜೆಪಿ ಸೇರಿದ ನಟ ಮಿಥುನ್

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಪ್ರಚಾರ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ಬೃಹತ್ ಸಮಾವೇಶ ನಡೆಸಲಿದ್ದಾರೆ.

ಸಮಾವೇಶದಲ್ಲಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಶನಿವಾರ ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯಾ ಅವರು ಮಿಥುನ್ ಚಕ್ರವರ್ತಿ ಮನೆಗೆ ಭೇಟಿ ನೀಡಿದ್ದರು.

‘ಭಾರತ್ ಮಾತಾ ಕೀ ಜೈ’ ಮತ್ತು ‘ಜೈ ಶ್ರೀರಾಮ್’ ಘೋಷಣೆಗಳ ನಡುವೆಯೇ ಭಾನುವಾರ ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಹಿರಿಯ ನಟ ಮಿಥುನ್ ಬಿಜೆಪಿ ಸೇರಿದರು.

ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಚಿತ್ರನಟರ ಭಾಗವಹಿಸುವಿಕೆ ಬಿಜೆಪಿ ಬೆಂಬಲಿಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಒಮ್ಮೆ ಸಿಪಿಐ(ಎಂ)ಗೆ ಆಪ್ತರಾಗಿದ್ದ ಮಿಥುನ್ ಚಕ್ರವರ್ತಿ ಅವರು ಕೆಲವು ವರ್ಷಗಳ ಕಾಲ ಟಿಎಂಸಿಯ ರಾಜ್ಯಸಭಾ ಸಂಸದರಾಗಿದ್ದರು.