Friday, 22nd November 2024

ಮುಖ್ಯ ಕಾರ್ಯದರ್ಶಿ ಬದಲಾಯಿಸುವಂತೆ ಒತ್ತಾಯಿಸಿ ’ಶಾ’ ರಿಗೆ ಪತ್ರ

ಗುವಾಹಟಿ: ಮುಖ್ಯ ಕಾರ್ಯದರ್ಶಿಯನ್ನು ಬದಲಾಯಿಸುವಂತೆ ಒತ್ತಾಯಿಸಿ ಮಿಜೋರಾಂ ಮುಖ್ಯಮಂತ್ರಿ ಝೋರಾಮ್‌ತಂಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನಾಗಿ ರೇಣು ಶರ್ಮಾ ಅವರನ್ನು ನೇಮಿಸಿರುವ ಕೇಂದ್ರ ಸರಕಾರ ತನ್ನ ಆದೇಶವನ್ನು ಮಾರ್ಪಡಿಸಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೆಸಿ ರಾಮತಂಗ ಅವರನ್ನು ನೂತನ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸು ವಂತೆ ಅಮಿತ್ ಶಾ ಅವರಿಗೆ ಝೋರಾಮ್‌ತಂಗ ಪತ್ರ ಬರೆದಿದ್ದಾರೆ.

ವಿಜೋರಾಂ ಸಚಿವರಿಗೆ ಹಿಂದಿ ಅರ್ಥವಾಗುವುದಿಲ್ಲ ಮತ್ತು ಅವರಲ್ಲಿ ಕೆಲವರಿಗೆ ಇಂಗ್ಲಿಷ್ ಕೂಡ ಬರುವುದಿಲ್ಲ ಹೀಗಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ಬದಲಾಯಿಸಿ ಎಂದು ಮಿಜೋ ಸಿಎಂ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಮಿಜೋರಾಂ ಜನರಿಗೆ, ನನ್ನ ಕ್ಯಾಬಿನೆಟ್ ಮಂತ್ರಿಗಳಲ್ಲಿ ಯಾರಿಗೂ ಹಿಂದಿ ಅರ್ಥವಾಗು ವುದಿಲ್ಲ, ಕೆಲವರಿಗೆ ಇಂಗ್ಲಿಷ್ ಭಾಷೆಯ ಸಮಸ್ಯೆಯೂ ಇದೆ. ಮಿಜೋರಾಂ ಭಾಷೆಯ ಜ್ಞಾನವಿಲ್ಲದ ಮುಖ್ಯ ಕಾರ್ಯದರ್ಶಿ ಎಂದಿಗೂ ಪರಿಣಾಮಕಾರಿ ಮತ್ತು ದಕ್ಷ ಮುಖ್ಯ ಕಾರ್ಯದರ್ಶಿಯಾಗುವುದಿಲ್ಲ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಮಿಜೋರಾಂ ರಾಜ್ಯ ರಚನೆಯಾದಾಗಿನಿಂದ ಮಿಜೋರಾಂ ಭಾಷೆಯ ಕಾರ್ಯ ಗುಣಮಟ್ಟವನ್ನು ತಿಳಿದಿಲ್ಲದ ಮುಖ್ಯ ಕಾರ್ಯ ದರ್ಶಿಯನ್ನು ಭಾರತ ಸರ್ಕಾರವು ಎಂದಿಗೂ ಪೋಸ್ಟ್ ಮಾಡಲಿಲ್ಲ. ಮಿಜೋರಾಂ ರಾಜ್ಯ ರಚನೆಯಾದಾಗಿನಿಂದ ಈ ಪದ್ಧತಿ ಜಾರಿಯಲ್ಲಿದೆ. ಆಯಾ ರಾಜ್ಯದ ಮೂಲ ಆಡಳಿತ ಭಾಷೆಯೂ ತಿಳಿಯದ ಮುಖ್ಯ ಕಾರ್ಯದರ್ಶಿಯನ್ನು ಯಾವತ್ತೂ ಪೋಸ್ಟ್ ಮಾಡಲಾಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.