Saturday, 23rd November 2024

ಅಟಲ್ ಟನಲ್‌ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ ಶಾಸಕನಿಗೆ ಕೊರೊನಾ ದೃಢ

ಶಿಮ್ಲಾ: ‘ಅಟಲ್ ಟನಲ್’ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕ ರೊಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ.

ಹಿಮಾಚಲ ಪ್ರದೇಶದ ರೋಹ್ಟಂಗ್​ನಲ್ಲಿ ಅ.3 ರಂದು ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್, ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್​ ಸೇರಿ ಇತರ ಗಣ್ಯರು ಪಾಲ್ಗೊಂಡಿದ್ದರು. ಇವರಲ್ಲಿ ಕುಲ್ಲು ಜಿಲ್ಲೆಯ ಬಂಜಾರ ಕ್ಷೇತ್ರದ ಶಾಸಕ ಸುರೇಂದ್ರ ಶೌರಿ ಅವರಿಗೆ ವೈರಸ್​ ತಗುಲಿದೆ.

ಶೌರಿ ಅವರು ಅ.1 ರಂದು ಕೋವಿಡ್​ ಪರೀಕ್ಷೆಗೆ ಒಳಗಾಗಿದ್ದರು. ಅ.2 ರ ಸಂಜೆಯೇ ವರದಿ ಪಾಸಿ ಟಿವ್​ ಬಂದಿದೆ. ಆದರೂ ಅ.3 ರಂದು ಸುರಂಗಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಭಾಗ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.