ಭಾರತೀಯ ರೈಲ್ವೆಯು ದೇಶದ ಜೀವನಾಡಿಯ ರೀತಿಯಲ್ಲಿ ಕೆಲಸ ಮಾಡುತ್ತದೆ ಮತ್ತು ಇಡೀ ದೇಶದ ಉದ್ದಗಲಕ್ಕೂ ರೈಲುಗಳು ತನ್ನ ಬಾಹುಗಳನ್ನು ಚಾಚಿವೆ. ಭಾರತೀಯ ರೈಲಿನಲ್ಲಿ ಪ್ರತಿಯೊಬ್ಬರಿಗೂ ಪ್ರಯಾಣ ಅನುಭವವನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಭಾರತದ ಪ್ರಮುಖ ಆನ್‌ಲೈನ್ ಟ್ರಾವೆಲ್ ಕಂಪನಿ ಮೇಕ್‌ಮೈಟ್ರಿಪ್ ಹಲವು ತಂತ್ರಜ್ಞಾನ ಆಧರಿತ ಸೌಲಭ್ಯಗಳನ್ನು ಪರಿಚಯಿಸಿದ್ದು ಸಾಮಾನ್ಯವಾಗಿ ಎಲ್ಲರಿಗೂ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.
ಬುಕಿಂಗ್ ಅನುಭವವನ್ನು ವಿವಿಧ ಹಂತಗಳನ್ನಾಗಿ ವಿಭಾಗಿಸಿದ್ದು, ಈ ಪ್ರತಿ ಹಂತದಲ್ಲೂ ಅನುಭವ ಸುಧಾರಣೆಗೆ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿದೆ. ಟ್ರೇನ್ ಟಿಕೆಟ್ ಬುಕಿಂಗ್‌ನಲ್ಲಿ ಅತ್ಯಂತ ಸಾಮಾನ್ಯ ಸಮಸ್ಯೆಗಳೆಂದರೆ, ಕನ್ಫರ್ಮ್ಡ್ ಟಿಕೆಟ್‌ಗಳನ್ನು ಪಡೆದುಕೊಳ್ಳುವಲ್ಲಿ ಎದುರಾಗುವ ಸಮಸ್ಯೆಗಳಾಗಿವೆ. ದೃಢೀಕೃತ ಟಿಕೆಟ್‌ಗಳ ಬುಕಿಂಗ್ ವಿಂಡೋ 120 ದಿನಗಳಿಗೂ ಮೊದಲು ಆರಂಭವಾಗುತ್ತದೆ ಮತ್ತು ತುಂಬಾ ಬೇಗ ಭರ್ತಿಯಾಗುತ್ತದೆ. ಇದರಿಂದ ಪ್ರಯಾಣಿಕರಿ ವೇಟ್‌ಲಿಸ್ಟ್‌ನಲ್ಲಿ ಇರಬಕಾಗುತ್ತದೆ. ಇದರಿಂದ ತುಂಬಾ ಸವಾಲುಗಳು ಎದುರಾಗುತ್ತವೆ. ಅದರಲ್ಲೂ ಗ್ರೂಪ್ ಟ್ರಾವೆಲರ್‌ಗಳಿಗೆ ಟ್ರಾವೆಲ್ ಪ್ಲಾನ್‌ನಲ್ಲಿ ಖಾತರಿ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಮಹತ್ವದ ವೈಶಿಷ್ಟವೇನೆಂದರೆ, ಮೇಕ್‌ಮೈಟ್ರಿಪ್ ಟ್ರೇನ್ಸ್‌ನಲ್ಲಿ ಸೀಟ್ ಲಾಕ್ ಫೀಚರ್ ಅನ್ನು ಅಳವಡಿಸಲಾಗಿದ್ದು, ಶುಲ್ಕದ 25% ಪಾವತಿ ಮಾಡಿ ಕನ್ಫರ್ಮ್ಡ್ ಟಿಕೆಟ್ ಅನ್ನು ಪಡೆದುಕೊಳ್ಳಬಹುದು.
ಉಳಿದ ಮೊತ್ತವನ್ನು ಪ್ರಯಾಣದ 24 ಗಂಟೆಗಳ ಮೊದಲು ಪಾವತಿ ಮಾಡಬಹುದಾಗಿರುತ್ತದೆ. ಟ್ರೇನ್ ಟಿಕೆಟ್ ಬುಕಿಂಗ್‌ನಲ್ಲಿ ಇನ್ನೊಂದು ಪ್ರಮುಖ ಸಮಸ್ಯೆಯೇನೆಂದರೆ, ನಿರ್ದಿಷ್ಟ ದಿನದಿಂದ ಕನ್ಫರ್ಮ್ಡ್ ಟಿಕೆಟ್‌ಗಳು ಡೈರೆಕ್ಟ್ ಟ್ರೇನ್‌ಗಳು/ನಮಗೆ ಬೇಕಾದ ಟ್ರೇನ್‌ಗಳಲ್ಲಿ ಸಿಗುವುದಿಲ್ಲ. ಇದರಿಂದ ತುಂಬಾ ಸಮಸ್ಯೆಗಳಾಗುತ್ತವೆ. ಇದಕ್ಕಾಗಿ ಮೇಕ್‌ಮೈಟ್ರಿಪ್ ಈಗ ಕನೆಕ್ಟೆಡ್ ಟ್ರಾವೆಲ್ ವೈಶಿಷ್ಟ್ಯವನ್ನು ಪರಿಚಯಿಸಿದ್ದು, ಬಸ್ ಮತ್ತು ರೈಲು ಪ್ರಯಾಣವನ್ನು ಸುಲಭವಾಗಿ ಸಂಯೋಜನೆ ಮಾಡುತ್ತದೆ ಮತ್ತು ಲೇಓವರ್ ಸಮಯ ಮತ್ತು ಒಟ್ಟಾರೆ ಪ್ರಯಾಣ ಅವಧಿಯನ್ನು ಪರಿಗಣಿಸಿ ಹಲವು ಸಂಯೋಜನೆ ಗಳನ್ನು ಒದಗಿಸುತ್ತದೆ.
”ನಾವು ರೈಲು ಪ್ರಯಾಣ ಅನುಕೂಲವನ್ನು ಇನ್ನಷ್ಟು ಸುಧಾರಿಸುವ ಗುರಿ ಹೊಂದಿದ್ದೇವೆ ಮತ್ತು ಮೇಕ್‌ಮೈಟ್ರಿಪ್‌ನಲ್ಲಿ ಪ್ರತಿ ಪ್ರಯಾಣವೂ ನೆನಪಿಡು ವಂಥದ್ದಾಗಿಸಬೇಕು ಎಂದುಕೊಂಡಿದ್ದೇವೆ. ರೈಲು ಪ್ರಯಾಣದ ಇಡೀ ಸನ್ನಿವೇಶವನ್ನು ನಾವು ಅಧ್ಯಯನ ನಡೆಸಿದ್ದೇವೆ. ಯೋಜನೆ ಮಾಡುವುದರಿಂದ, ಸರಿಯಾದ ರೈಲನ್ನು ಗುರುತಿಸುವುದು, ನಿಜವಾದ ಖರೀದಿ ಅನುಭವ ಮತ್ತು ಆಗಮಿಸುವುದಕ್ಕೂ ಮೊದಲಿನ ಹಂತಗಳವರೆಗೆ ಎಲ್ಲವನ್ನೂ ನಾವು ಗಮನಿಸಿದ್ದೇವೆ. ನಮ್ಮ ಹೊಸ ಸೌಲಭ್ಯಗಳನ್ನು ಪರಿಚಯಿಸಿದ ನಂತರದಲ್ಲಿ ಟ್ರೇನ್ ಬುಕಿಂಗ್‌ನಿಂದ ಪ್ರಯಾಣದವರೆಗೆ ಪ್ರತಿ ಹೆಜ್ಜೆಯೂ ಇನ್ನಷ್ಟು ಅನುಕೂಲಕರವಾಗಿರಲಿದೆ. ಪ್ರಯಾಣಿಕರಿಗೆ ಅಪಾರ ಆಯ್ಕೆ ಒದಗಿಸುವುದು, ಅನುಕೂಲ ಕಲ್ಪಿಸುವುದು, ಮನಃಶಾಂತಿ ಒದಗಿಸುವುದು, ಹೊಸ ಮಾನದಂಡಗಳನ್ನು ನಿಗದಿ ಮಾಡುವುದು ಇತ್ಯಾದಿಯನ್ನು ನಾವು ಇದಕ್ಕೆ ಆಧಾರವಾಗಿರಿಸಿಕೊಂಡಿದ್ದೇವೆ” ಎಂದು ಮೇಕ್‌ಮೈಟ್ರಿಪ್‌ನ ಸಹಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮ್ಯಾಗೋವ್ ಹೇಳಿದ್ದಾರೆ.
ಮತ್ತೊಂದು ನಿರ್ಣಾಯಕ ಸೌಲಭ್ಯವಾದ ಹೊಸ ಮಾರ್ಗ ವಿಸ್ತರಣೆ ಸಹಾಯ ಅನ್ನೂ ನಾವು ಪರಿಚಯಿಸಿದ್ದೇವೆ. ಇದಕ್ಕಾಗಿ ನಾವು ಅಲ್ಗಾರಿಥಮ್‌ಗಳನ್ನು ರೂಪಿಸಿದ್ದು, ನಮಗೆ ಬೇಕಾದ ಮಾರ್ಗದಲ್ಲಿ ಆಸನಗಳು ಲಭ್ಯವಿಲ್ಲದಿದ್ದಾಗ ಪರ್ಯಾಯ ಆಯ್ಕೆಗಳನ್ನು ನೀಡುತ್ತದೆ. ಉದಾಹರಣೆಗೆ, ಪ್ರಯಾಣಿಕರು A ನಿಲ್ದಾಣದಿಂದ B ವರೆಗೆ ದೃಢೀಕರಿಸಿದ ಸೀಟನ್ನು ಪಡೆಯಲು ಸಾಧ್ಯವಾಗದಿದ್ದರೆ, ಅದೇ ರೈಲಿನಲ್ಲಿ A ಇಂದ C ವರೆಗೆ ಒಂದು ಆಯ್ಕೆಯನ್ನು ಸೂಚಿಸುತ್ತದೆ. ಆಗ, ಆ ಮಾರ್ಗದಲ್ಲಿ ಬರುವ B ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಇಳಿಯಲು ಅವಕಾಶ ಇರುತ್ತದೆ. ಈ ಸೌಲಭ್ಯ ಇಲ್ಲದಿದ್ದರೆ ಸಾಮಾನ್ಯ ಬಳಕೆದಾರರು ಟಿಕೆಟ್ ಬುಕ್ ಮಾಡಲು ಕಷ್ಟಪಡಬೇಕಾಗುತ್ತದೆ.
ಪ್ರಯಾಣಿಕರು ಮಾರ್ಗದ ನಕ್ಷೆಗಳು ಮತ್ತು ರೈಲಿನ ಸಂಯೋಜನೆಗಳನ್ನು ಪ್ರತ್ಯೇಕವಾಗಿ ಹುಡುಕಬೇಕಾಗಿಲ್ಲ. ಆಯ್ಕೆಮಾಡಿದ ನಿಲ್ದಾಣದಿಂದ ಟಿಕೆಟ್‌ಗಳು ಲಭ್ಯವಿಲ್ಲದಿದ್ದಾಗ ಕೆಲವು ಕಿಲೋಮೀಟರ್‌ಗಳ ವ್ಯಾಪ್ತಿಯಲ್ಲಿರುವ ನಿಲ್ದಾಣಗಳಿಂದ ರೈಲುಗಳನ್ನು ಸೂಚಿಸುವ ನಿಯರ್‌ಬೈ ಸ್ಟೇಶನ್ಸ್ ರೆಕಮೆಂಡೇಶನ್ಸ್ ಅನ್ನೂ ಸಹ ಇದು ನೀಡುತ್ತದೆ. ಅಂದರೆ, ಪ್ರಯಾಣಿಕರಿಗೆ A ಇಂದ C ಗೆ ರೈಲು ಸಿಗದಿದ್ದರೆ, ಅವರು ಹತ್ತಿರದ ಸ್ಟೇಷನ್ B ಇಂದ ಟ್ರೇನ್ ಹುಡುಕಬಹುದು. ಇದರ ಜೊತೆಗೆ, ಫ್ರೀ ಕ್ಯಾನ್ಸಲೇಶನ್ ಆಯ್ಕೆಯೂ ಇದ್ದು, 100% ರದ್ದತಿ ದಂಡ ಮನ್ನಾ ಮಾಡುತ್ತದೆ. ಗ್ರಾಹಕರು ತಮ್ಮ ಪ್ರಯಾಣ ಯೋಜನೆಗಳನ್ನು ಬದಲಾಯಿಸುವುದಕ್ಕೆ ಇದು ಅವಕಾಶ ನೀಡುತ್ತದೆ. ಕ್ಯಾನ್ಸಲೇಶನ್ ಫೀ ಬಗ್ಗೆ ಟೆನ್ಷನ್ ಮಾಡಿಕೊಳ್ಳಬೇಕಿರುವುದಿಲ್ಲ.
ತೃಪ್ತಿಕರವಾದ ಊಟವಿಲ್ಲದೆ ಯಾವುದೇ ಪ್ರಯಾಣಕ್ಕೆ ಪೂರ್ಣ ವಿರಾಮ ಬೀಳುವುದಿಲ್ಲ. ಫುಡ್ ಇನ್ ಟ್ರೈನ್ ಸೌಲಭ್ಯದಲ್ಲಿ, ಪ್ರಯಾಣಿಕರು ವಿವಿಧ ರೆಸ್ಟೋರೆಂಟ್‌ಗಳನ್ನು ಹುಡುಕಬಹುದು. ಪ್ರಯಾಣ ಪ್ರಾರಂಭಿಸಿದ ನಂತರವೂ ತಮ್ಮ ಆಸನಗಳಿಗೆ ಆಹಾರ ವಿತರಣೆಯನ್ನು ಸುಲಭವಾಗಿ ಷೆಡ್ಯೂಲ್ ಮಾಡಬಹುದು. ಚಿಂತೆ ರಹಿತ ಪ್ರಯಾಣಕ್ಕಾಗಿ, ಬುಕಿಂಗ್ ಸ್ಥಿತಿ ಮತ್ತು ಪರ್ಸನಲೈಸ್ ಮಾಡಿದ ಪರ್ಯಾಯ ಪ್ರಯಾಣ ಶಿಫಾರಸುಗಳನ್ನು ನೀಡಲು ಪಿಎನ್‌ಆರ್ ಮತ್ತು ಲಭ್ಯತೆಯ ಎಚ್ಚರಿಕೆಗಳನ್ನೂ ಕೂಡಾ ಸಹ ಒದಗಿಸುತ್ತದೆ. ಟ್ರೈನ್ ಟ್ರ್ಯಾಕಿಂಗ್ ಮತ್ತು ಪ್ಲಾಟ್‌ಫಾರ್ಮ್ ಲೊಕೇಟರ್ ವೈಶಿಷ್ಟ್ಯಗಳು ರೈಲು ಪ್ರಯಾಣಿಕರಿಗೆ ಫೋನ್ ನೆಟ್‌ವರ್ಕ್ ಇಲ್ಲದಿದ್ದರೂ ಸಹ ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್‌ಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀಡುತ್ತದೆ.
ಈ ಹೊಸ ವೈಶಿಷ್ಟ್ಯಗಳು ಮೇಕ್‌ಮೈಟ್ರಿಪ್‌ನ ಹೊಸ ಕೊಡುಗೆಗಳಲ್ಲಿ ಮಹತ್ವದ್ದಾಗಿದ್ದು, 2021 ರಲ್ಲಿ ಟ್ರಿಪ್ ಗ್ಯಾರಂಟಿಯ ಯಶಸ್ವಿ ಪ್ರಾರಂಭದ ನಂತರದಲ್ಲಿ ಪ್ರಕಟವಾಗಿವೆ.