ಮಹಾರಾಷ್ಟ್ರದ ಪಶ್ಚಿಮ ವಿದರ್ಭ ಪ್ರದೇಶದ ಯವತ್ಮಾಲ್ ಜಿಲ್ಲೆಯ ಬನ್ಸಿ ಎಂಬ ಗ್ರಾಮವು ಮಕ್ಕಳು ಮತ್ತು ಹದಿಹರೆಯದವರು ಮೊಬೈಲ್ ಫೋನ್‌ಗಳಿಗೆ ವ್ಯಸನಿಯಾಗುತ್ತಿರುವುದನ್ನು ಗಮನಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಮಕ್ಕಳು ತಮ್ಮ ವೀಕ್ಷಣೆಗೆ ಯೋಗ್ಯವಲ್ಲದ ಆಟಗಳನ್ನು ನೋಡುವ ಮತ್ತು ಸರ್ಫಿಂಗ್ ಮಾಡುವ ಚಟಕ್ಕೆ ಬಿದ್ದಿರುವ ಬಗ್ಗೆ ಪುಸಾದ್ ತಹಸಿಲ್ ವ್ಯಾಪ್ತಿಯ ಬಂಸಿ ಗ್ರಾಮದ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಬನ್ಸಿ ಗ್ರಾಮ ಪಂಚಾಯಿತಿಯ ಸರಪಂಚ್ ಗಜಾನನ ತಾಳೆ ಮಾತನಾಡಿ, ಎಲ್ಲಾ ಪಾಲಕರು ತಮ್ಮ ಮಕ್ಕಳಿಗೆ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಳಿಕೊಳ್ಳಲಾಗಿದೆ.
ಗ್ರಾಮದ ಶಾಲಾ ಮಕ್ಕಳು ಮೊಬೈಲ್ ಗೆ ದಾಸರಾಗುತ್ತಿದ್ದು, ಅದಕ್ಕೆ ಸ್ಪಂದಿಸಿ 18 ವರ್ಷ ದೊಳಗಿನ ಮಕ್ಕಳಿಗೆ ಮೊಬೈಲ್ ಫೋನ್ ನಿಷೇಧಿಸುವ ಔಪಚಾರಿಕ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
‘ಅನುಷ್ಠಾನದಲ್ಲಿ ತೊಂದರೆಗಳು ಉಂಟಾಗುತ್ತವೆ ಎಂದು ನಮಗೆ ತಿಳಿದಿದೆ. ಆದರೆ ನಾವು ಕೌನ್ಸೆಲಿಂಗ್ ಮೂಲಕ ಈ ಸಮಸ್ಯೆ ಗಳನ್ನು ನಿವಾರಿಸುತ್ತೇವೆ. ನಿರ್ಧಾರದ ಉಲ್ಲಂಘನೆಗಾಗಿ ಅವರ ಮೇಲೆ ದಂಡವನ್ನು ವಿಧಿಸಬೇಕಾಗುತ್ತದೆ. ಆದರೆ ಗ್ರಾಮಸ್ಥರು ಈ ನಿರ್ಧಾರವನ್ನು ಒಮ್ಮತದಿಂದ ಬೆಂಬಲಿಸಿದ್ದಾರೆ ಎಂದು ಹೇಳಿದರು.