Saturday, 27th July 2024

ಚುನಾವಣೆ ಬಳಿಕ ಮೊಬೈಲ್ ರೀಚಾರ್ಜ್ ದುಬಾರಿ..!

ವದೆಹಲಿ: ಮೊಬೈಲ್ ಸೇವಾ ಸಂಸ್ಥೆಗಳು ಸುಂಕ ಹೆಚ್ಚಿಸಲು ಸಂಪೂರ್ಣ ಸಿದ್ಧತೆ ನಡೆಸಿದ್ದು, ಲೋಕಸಭೆ ಚುನಾವಣೆಯ ನಂತರ ಮೊಬೈಲ್ ರೀಚಾರ್ಜ್ ದುಬಾರಿಯಾಗಲಿದೆ ಎಂದು ವರದಿಯಾಗಿದೆ.

ಚುನಾವಣೆಯ ನಂತರ ಟೆಲಿಕಾಂ ಉದ್ಯಮದಲ್ಲಿ ಅಂದಾಜು 15-17% ನಷ್ಟು ಸುಂಕ ಹೆಚ್ಚಳವಾಗಲಿದೆ. ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ಏ.19 ರಿಂದ ಜೂನ್ 1 ರವರೆಗೆ 7 ಹಂತಗಳಲ್ಲಿ ನಡೆಯಲಿವೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಟೆಲಿಕಾಂ ವಲಯದಲ್ಲಿ ಸುಂಕ ಹೆಚ್ಚಳವು ಬಹಳ ದಿನಗಳಿಂದ ಬಾಕಿ ಉಳಿದಿದ್ದು, ಚುನಾವಣೆಯ ನಂತರ ಹೆಚ್ಚಳ ಖಚಿತ ಎಂದು ನಂಬಲಾಗಿದೆ. ಭಾರ್ತಿ ಏರ್‌ಟೆಲ್‌ಗೆ ಇದರಿಂದ ಹೆಚ್ಚಿನ ಲಾಭವಾಗಲಿದೆ.

ಲೋಕಸಭಾ ಚುನಾವಣೆಯ ನಂತರ ಟಿಲಿಕಾಂ ಉದ್ಯಮವು ಶೇ.15-17ರಷ್ಟು ಶುಲ್ಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಡಿಸೆಂಬರ್ 2021ರಲ್ಲಿ ಕೊನೆಯ ಬಾರಿಗೆ ಸುಮಾರು 20% ನಷ್ಟು ಶುಲ್ಕ ಹೆಚ್ಚಿಸಲಾಗಿತ್ತು. ಅಂದರೆ ಸದ್ಯ ಸುಮಾರು 3 ವರ್ಷಗಳ ನಂತರ ಸುಂಕವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಉದಾಹರಣೆಗೆ ಈಗ 17% ರಷ್ಟು ಶುಲ್ಕ ಹೆಚ್ಚಳವಾಗಿ 300 ರೂ ರೀಚಾರ್ಜ್ ಮಾಡಿದರೆ, ಶುಲ್ಕ ಹೆಚ್ಚಳದ ನಂತರ ನೀವು 351 ರೂಪಾಯಿ ಪಾವತಿಸಬೇಕಾಗುತ್ತದೆ.

ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಏರ್‌ಟೆಲ್‌ ಕಂಪನಿಯ ಪ್ರಸ್ತುತ ಎಆರ್‌ಪಿಯು ರೂ 208 ಆಗಿದೆ. ಅಂದರೆ ರೂ 208 ಎಂದು ‘ದಲ್ಲಾಳಿ ಟಿಪ್ಪಣಿ’ಯಲ್ಲಿ ತಿಳಿಸಿದೆ. ಆರ್ಥಿಕ ವರ್ಷ 2026-27 ಅಂತ್ಯದ ವೇಳೆಗೆ ರೂ 286 ತಲುಪುವ ಸಾಧ್ಯತೆ ಯಿದೆ.

Leave a Reply

Your email address will not be published. Required fields are marked *

error: Content is protected !!