Sunday, 15th December 2024

ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ: ಪುಟಿನ್’ಗೆ ಮೋದಿ ಮನವಿ

ನವದೆಹಲಿ : ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ಯುದ್ಧ ನಿಲ್ಲಿಸಿ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಬೇಕಾಗಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರ ಬಳಿ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಯುದ್ಧ ಆರಂಭವಾಗುತ್ತಿದ್ದಂತೆ ಭಾರತದ ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕೆಂಬ ಮಾತು ಕೇಳಿಬರುತ್ತಿತ್ತು. ಇದೀಗ ಮೋದಿ, ಪುಟಿನ್ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ, ಯುದ್ಧ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

ಯುದ್ಧದಿಂದಾಗಿ ಉಕ್ರೇನ್‍ನಲ್ಲಿರುವ ಭಾರತೀಯರ ಬಗ್ಗೆ ವಿಶೇಷವಾಗಿ ಮಾತುಕತೆ ನಡೆಸಿದ್ದು, ಅವರ ಸುರಕ್ಷತೆ ಮುಖ್ಯ ಎಂದಿದ್ದಾರೆ. ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ಭಾರತಕ್ಕೆ ಮರಳು ವಂತಾಗಬೇಕೆಂದು ಸ್ಪಷ್ಟಪಡಿಸಿದ್ದಾರೆ.

ರಷ್ಯಾ ಮತ್ತು ನ್ಯಾಟೋ ನಡುವಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಮಾತ್ರ ಪರಿಹರಿಸ ಬಹುದು. ಯುದ್ಧದಿಂದ ಅತಿ ಹೆಚ್ಚು ಹಾನಿ ಯಾಗಲಿದೆ. ಭಾರತೀಯಯರ ರಕ್ಷಣೆಗೆ ಭಾರತದ ರಾಜತಾಂತ್ರಿಕರು ನಿರಂತರ ಸಂಪರ್ಕ ಹೊಂದಲಿದ್ದಾರೆ ಎಂದು ಮೋದಿ ಮನವಿ ಮಾಡಿದ್ದು, ಸಂಪರ್ಕದಲ್ಲಿರುವುದಾಗಿ ಪುಟಿನ್ ಭರವಸೆ ನೀಡಿದರು.