ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಚಿತ್ರವನ್ನು ಬದಲಿಸಿದ್ದಾರೆ.
ಮನ್ ಕೀ ಬಾತ್ ರೆಡಿಯೋ ಕಾರ್ಯಕ್ರಮದಲ್ಲಿ ಅವರು ಪ್ರೊಫೈಲ್ ಚಿತ್ರ ಬದಲಿಸುವಂತೆ ಭಾನುವಾರ ಕರೆ ನೀಡಿದ್ದರು. ಇಂದು ಆಗಸ್ಟ್ 2 ರ ವಿಶೇಷ! ನಾವು ಆಜಾದಿ ಕಾ ಅಮೃತ್ ಮಹೋತ್ಸವ ಆಚರಿಸುತ್ತಿರುವ ಈ ಸಮಯದಲ್ಲಿ ನಮ್ಮ ರಾಷ್ಟ್ರವು ನಮ್ಮ ತ್ರಿವರ್ಣ ಧ್ವಜ ಅಳವಡಿಸುವ ಒಂದು ಸಾಮೂ ಹಿಕ ಆಂದೋಲನವಾದ ಹರ್ ಘರ್ ತಿರಂಗಕ್ಕೆ ಸಿದ್ಧವಾಗಿದೆ. ನಾನು ನನ್ನ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಡಿಪಿಯನ್ನು ಬದಲಾಯಿಸಿದ್ದೇನೆ. ಅದೇ ರೀತಿ ಮಾಡುವಂತೆ ನಿಮ್ಮೆಲ್ಲರನ್ನು ಒತ್ತಾಯಿಸು ತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ನೆನಪಿಗಾಗಿ ಆ.2 ರಿಂದ ಆ.15 ರ ನಡುವೆ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಮತ್ತು ತಿರಂಗವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರೊಫೈಲ್ ಚಿತ್ರವಾಗಿ ಬಳಸುವ ಮೂಲಕ ‘ಹರ್ ಘರ್ ತಿರಂಗ’ ಅಭಿಯಾನವನ್ನು ಸಾಮೂಹಿಕ ಆಂದೋಲನವಾಗಿ ಪರಿವರ್ತಿಸು ವಂತೆ ಪಿಎಂ ಮೋದಿ ನಾಗರಿಕರಿಗೆ ಕರೆ ನೀಡಿದರು.
ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಆ.13ರಿಂದ 15ರವರೆಗೆ ವಿಶೇಷ ಆಂದೋಲನ ‘ಹರ್ ಘರ್ ತಿರಂಗ’ ಆಯೋಜಿ ಸಲಾಗಿದೆ. ಆಗಸ್ಟ್ 2 ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದ ಪಿಂಗಳಿ ವೆಂಕಯ್ಯ ಅವರ ಜನ್ಮದಿನವಾಗಿದೆ.
‘ಹರ್ ಘರ್ ತಿರಂಗ’ ಎಂಬುದು ಆಜಾದಿ ಕಾ ಅಮೃತ್ ಮಹೋತ್ಸವದ ಆಶ್ರಯದಲ್ಲಿ ತಿರಂಗವನ್ನು ಮನೆಗೆ ತರಲು ಮತ್ತು ಭಾರತದ 75ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸಿಲು ಜನರನ್ನು ಪ್ರೋತ್ಸಾಹಿಸಲು ಒಂದು ಅಭಿಯಾನವಾಗಿದೆ.