Sunday, 15th December 2024

ಮಾಧವ ಸಿನ್ಹ ಸೋಲಂಕಿ ನಿಧನಕ್ಕೆ ಮೋದಿ ಸಂತಾಪ

ನವದೆಹಲಿ: ನಾಲ್ಕು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಾಧವ ಸಿನ್ಹ ಸೋಲಂಕಿ (93) ಶನಿವಾರ ನಿಧನರಾದರು. ಮಾಧವಸಿನ್ಹ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಸೋಲಂಕಿ ಅಸಾಧಾರಣ ನಾಯಕರಾಗಿದ್ದರು. ಗುಜರಾತ್ ರಾಜಕೀಯದಲ್ಲಿ ದಶಕಗಳ ಕಾಲ ಪ್ರಮುಖ ಪಾತ್ರ ವಹಿಸಿದ್ದರು. ಸಮಾಜಕ್ಕೆ ಅವರು ಮಾಡಿದ ಸಮೃದ್ಧ ಸೇವೆಗಾಗಿ ಅವರನ್ನು ಸ್ಮರಿಸಲಾಗುವುದು.

ಅವರ ನಿಧನದಿಂದ ದು:ಖಿತನಾಗಿದ್ದೇನೆ. ಅವರ ಪುತ್ರ ಭಾರತ್ ಸೋಲಂಕಿ ಜೊತೆ ಮಾತನಾಡಿದ್ದು, ಸಂತಾಪವನ್ನು ಸೂಚಿಸಿ ದ್ದೇನೆ. ಓಂ ಶಾಂತಿ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.