ನವದೆಹಲಿ: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅನುರಾ ಕುಮಾರ ದಿಸ್ಸಾನಾಯಕೆ (Anura Dissanayake) ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಮೋದಿ ನೆರೆಯ ರಾಷ್ಟ್ರದ ನಾಯಕನ ಆಯ್ಕೆಯ ಬಗ್ಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇಂಡೋ-ಲಂಕಾ ನಡುವಿನ ಸಹಕಾರವನ್ನು ಬಲಪಡಿಸಲು ಅನುರಾ ಜತೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
Congratulations @anuradisanayake, on your victory in the Sri Lankan Presidential elections. Sri Lanka holds a special place in India's Neighbourhood First Policy and Vision SAGAR. I look forward to working closely with you to further strengthen our multifaceted cooperation for…
— Narendra Modi (@narendramodi) September 22, 2024
ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಸುತ್ತಿನ ಮತ ಎಣಿಕೆಯ ನಂತರ ಮಾರ್ಕ್ಸ್‌ವಾದಿ ನಾಯಕ ಅನುರಾ ದಿಸ್ಸಾನಾಯಕೆ ಗೆಲುವು ಸಾಧಿಸಿದ್ದರು. ಅವರಿಗೆ ಇದು ಅಭೂತಪೂರ್ವ ಜಯವಾಗಿದೆ.
ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ನಾಯಕ ದಿಸ್ಸಾನಾಯಕೆ (56) ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಗಿ ಜನ ಬಲವೇಗಯ (ಎಸ್‌ಬಿಬಿ) ಸಜಿತ್ ಪ್ರೇಮದಾಸ ಅವರನ್ನು ಸೋಲಿಸಿ ರಾಷ್ಟ್ರ ನಾಯಕನ ಹುದ್ದೆ ಗಿಟ್ಟಿಸಿದ್ದಾರೆ. ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಮತ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಬರಲು ವಿಫಲವಾದ ಕಾರಣ ಮೊದಲ ಸುತ್ತಿನಲ್ಲೇ ಹೊರಕ್ಕೆ ನಡೆದಿದ್ದಾರೆ.
ಇದನ್ನೂ ಓದಿ: PM Modi visit US: ಭಾರತವನ್ನು ಇನ್ನು ಯಾರೂ ನಿಯಂತ್ರಿಸಲಾಗದು; ಅಮೆರಿಕದಲ್ಲಿ ಮೋದಿ ಉದ್ಘೋಷ
ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅನುರಾ ಅವರಿಗೆ ಅಭಿನಂದನೆಗಳು. ಭಾರತದ ನೆರೆಯ ದೇಶವಾಗಿರುವ ಶ್ರೀಲಂಕಾಕ್ಕೆ ವಿಶೇಷ ಸ್ಥಾನವಿದೆ” ಎಂದು ಪ್ರಧಾನಿ ಮೋದಿ ಹೇಳಿದರು. ನಮ್ಮ ಜನರ ಮತ್ತು ಇಡೀ ಪ್ರದೇಶದ ಪ್ರಯೋಜನಕ್ಕಾಗಿ ನಮ್ಮ ಬಹುಮುಖಿ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ಪ್ರಧಾನಿ ಮೋದಿ ಹೇಳಿಕೊಂಡಿದ್ದಾರೆ.