ನವದೆಹಲಿ: ಮೇ 2 ರಿಂದ ಭಾರತದ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.
2022ನೇ ವರ್ಷದಲ್ಲಿ ಮೊದಲ ಬಾರಿಗೆ ಮೋದಿ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ ದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡ ಲಿದ್ದಾರೆ. ಮೇ 2, 3 ಮತ್ತು 4ರಂದು ಮೋದಿ ವಿದೇಶ ಪ್ರವಾಸದಲ್ಲಿ ಇರಲಿದ್ದು, ವಿವಿಧ ನಾಯಕರನ್ನು ಭೇಟಿಯಾಗಲಿದ್ದಾರೆ.
ಭಾರತ-ಜರ್ಮನಿ ಅಂತರ ಸರ್ಕಾರಿ ಸಮಾಲೋಚನೆಯ 6ನೇ ಸಮ್ಮೇಳನದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಭಾರತ-ನಾರ್ಡಿಕ್ನ 2ನೇ ಶೃಂಗಸಭೆಯಲ್ಲಿಯೂ ಭಾಗಿಯಾಗ ಲಿದ್ದಾರೆ. ಈ ಶೃಂಗಸಭೆಯಲ್ಲಿ ನಾರ್ವೆ, ಡೆನ್ಮಾರ್ಕ್, ಸ್ವೀಡನ್, ಫಿನ್ಲ್ಯಾಂಡ್ ಮತ್ತು ಐಸ್ಲ್ಯಾಂಡ್ ನಾಯಕರು ಪಾಲ್ಗೊಳ್ಳಲಿದ್ದಾರೆ.
ಫ್ರಾನ್ಸ್ಗೆ ಭೇಟಿ ನೀಡಲಿರುವ ಮೋದಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಜೊತೆ ದಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಭೇಟಿ ಮಾಡಲಿದ್ದಾರೆ.
ಸೋಮವಾರ ಫ್ರೆಂಚ್ ಅಧ್ಯಕ್ಷರಾಗಿ ಎಮ್ಯಾನುಯೆಲ್ ಮ್ಯಾಕ್ರಾನ್ ಆಯ್ಕೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದರು.