Sunday, 15th December 2024

29 ಪುರಾತನ ವಸ್ತುಗಳ ಪ್ರಧಾನಿ ಮೋದಿ ಪರಿಶೀಲನೆ

ನವದೆಹಲಿ: ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯನ್ ನಡುವಿನ ಮಾತು ಕತೆಯ ಬಳಿಕ ಇಪ್ಪತ್ತೊಂಬತ್ತು ಪುರಾತನ ವಸ್ತು ಗಳನ್ನು ಆಸ್ಟ್ರೇಲಿಯಾದಿಂದ ಭಾರತಕ್ಕೆ ಹಿಂದಿರುಗಿಸ ಲಾಯಿತು.

ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ 29 ಪುರಾತನ ವಸ್ತುಗಳನ್ನು ಪ್ರಧಾನಿ ಮೋದಿ ಪರಿಶೀಲಿಸಿದರು.

ಪುರಾತನ ವಸ್ತುಗಳು ಥೀಮ್‌ಗಳ ಪ್ರಕಾರ 6 ವಿಶಾಲ ವಿಭಾಗಗಳನ್ನು ಹೊಂದಿವೆ – ಶಿವ ಮತ್ತು ಅವನ ಶಿಷ್ಯರು, ಶಕ್ತಿ, ಭಗವಾನ್ ವಿಷ್ಣು ಮತ್ತು ಅವನ ರೂಪಗಳನ್ನು ಪೂಜಿಸು ವುದು, ಜೈನ ಸಂಪ್ರದಾಯ, ಭಾವಚಿತ್ರಗಳು ಮತ್ತು ಅಲಂಕಾರಿಕ ವಸ್ತುಗಳು ಕೂಡ ಇದ್ದಾವೆ.

ಈ ಶಿಲ್ಪಗಳು ಮತ್ತು ವರ್ಣಚಿತ್ರಗಳು, ಕಲಾಕೃತಿಗಳು ರಾಜಸ್ಥಾನ, ಗುಜರಾತ್, ಮಧ್ಯ ಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲಿ ಕಳುವಾಗಿದ್ದವು ಎನ್ನಲಾಗಿದೆ.