Thursday, 19th September 2024

ವಿಶೇಷ ಉಡುಗೆ ಧರಿಸಿ ಪ್ರಧಾನಿ ಮೋದಿ ಕೇದಾರನಾಥನ ದರ್ಶನ

ಉತ್ತರಾಖಂಡ: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಉತ್ತರಾಖಂಡ ಪ್ರವಾಸದಲ್ಲಿದ್ದಾರೆ.

ಬಾಬಾ ಕೇದಾರನಾಥದ ಪುಣ್ಯಭೂಮಿಯನ್ನು ತಲುಪಿದ ಪ್ರಧಾನಿ ಮೋದಿ ಅವರು ಹಿಮಾಚಲ ಪ್ರದೇಶದ ಸ್ಥಳೀಯ ವಿಶೇಷ ಉಡುಗೆ ಧರಿಸಿ ಕೇದಾರನಾಥನ ದರ್ಶನಕ್ಕೆ ಹೋಗಿರುವುದು ತುಂಬಾ ವಿಶೇಷವಾಗಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇದಾರನಾಥ ಪ್ರವಾಸದಲ್ಲಿ ಧರಿಸಿರುವ ಉಡುಪನ್ನು ಚೋಳ ಡೋರಾ ಎಂದು ಕರೆಯಲಾಗುತ್ತದೆ. ಇದನ್ನು ಹಿಮಾಚಲ ಪ್ರದೇಶದ ಕೈಮಗ್ಗ ಉದ್ಯಮದಲ್ಲಿ ತಯಾರಿಸಲಾಗಿದೆ. ಪ್ರಧಾನಿ ಮೋದಿ ಹಿಮಾಚಲದ ಚಂಬಾ ಪ್ರವಾಸಕ್ಕೆ ಹೋದಾಗ ಮಹಿಳೆಯೊಬ್ಬರು ತಮ್ಮ ಕೈಯಿಂದ ಈ ಉಡುಪನ್ನು ಉಡುಗೊರೆ ಯಾಗಿ ನೀಡಿದ್ದಾರೆ.

ಚಂಬಾ ಪ್ರವಾಸದ ವೇಳೆ ಉಡುಪನ್ನು ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಗೆ ಚಳಿ ಪ್ರದೇಶಕ್ಕೆ ಹೋದಾಗ ಲೆಲ್ಲಾ ಅದನ್ನು ಧರಿಸುವುದಾಗಿ ಭರವಸೆ ನೀಡಿದ್ದರು. ಕೇದಾರನಾಥ ದೇಗುಲ ತಲುಪಿದ ನಂತರ, ಪ್ರಧಾನಿ ಮೋದಿ ತಮ್ಮ ಭರವಸೆ ಈಡೇರಿಸಿದರು ಮತ್ತು ಇಂದು ಪ್ರಧಾನಿ ಅದೇ ಉಡುಗೆಯನ್ನು ಧರಿಸಿ ಆಗಮಿಸಿದರು.

ಕೇದಾರನಾಥದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಧಾನಿ ಮೋದಿ ಬದರಿನಾಥಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಅವರು ಈ ಭೇಟಿಯ ಸಮಯದಲ್ಲಿ ಉತ್ತರಾಖಂಡದಲ್ಲಿ 3400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಲಿದ್ದಾರೆ.

ಕೇದಾರನಾಥ ದೇವಾಲಯ ದಲ್ಲಿ ಪೂಜೆ ಸಲ್ಲಿಸಿದ ನಂತರ, ಗೌರಿಕುಂಡ್ ಅನ್ನು ಕೇದಾರನಾಥದೊಂದಿಗೆ ಸಂಪರ್ಕಿಸುವ ರೋಪ್‌ವೇಗೆ ಶಂಕುಸ್ಥಾಪನೆ ಮಾಡಿದರು. ಕೇದಾರನಾಥ ರೋಪ್ ವೇ ಸುಮಾರು 9.7 ಕಿ.ಮೀ ಉದ್ದವಿರುತ್ತದೆ. ಇದು ಗೌರಿಕುಂಡ ವನ್ನು ಕೇದಾರನಾಥದೊಂದಿಗೆ ಸಂಪರ್ಕಿಸುತ್ತದೆ, ಎರಡು ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 6-7 ಗಂಟೆ ಗಳಿಂದ ಸುಮಾರು 30 ನಿಮಿಷಗಳಿಗೆ ಕಡಿಮೆ ಮಾಡುತ್ತದೆ.