Tuesday, 15th October 2024

’ಚೌರಿ ಚೌರಾ’ ಘಟನೆ ಶತಮಾನೋತ್ಸವ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹೆಗ್ಗುರುತು ಐತಿಹಾಸಿಕ ಚೌರಿ ಚೌರಾ ಘಟನೆ ನಡೆದು ಇಂದಿಗೆ ನೂರು ವರ್ಷ. ಚೌರಿ ಚೌರಾ ಘಟನೆಯ ಶತಮಾನೋತ್ಸವವನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಹಾಗೂ ಶತಮಾನೋತ್ಸವದ ಪ್ರಾರಂಭ ಗುರುತಿಸಲು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.

ಘಟನೆಯ ಹುತಾತ್ಮರನ್ನು ಕುರಿತು ಹೆಚ್ಚು ಚರ್ಚೆಗಳಾಗಿಲ್ಲ ಎನ್ನುವುದು ದುರದೃಷ್ಟಕರ. ಅವರಿಗೆ ಇತಿಹಾಸದ ಪುಟಗಳಲ್ಲಿ ಮಹತ್ವ ನೀಡಲಾಗಿಲ್ಲ ಅವರ ರಕ್ತವು ದೇಶದ ಮಣ್ಣಿನಲ್ಲಿ ಬೆರೆತಿದೆ, ನಮಗೆ ಸ್ಫೂರ್ತಿ ನೀಡುತ್ತಿದೆ ಪ್ರಧಾನಿ ಮೋದಿ ಹೇಳಿದರು.

ದೇಶದ ಪ್ರಗತಿಯ ಹಿಂದೆ ರೈತರ ಪರಿಶ್ರಮವಿದೆ. ಚೌರಿ ಚೌರಾ ಹೋರಾಟದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಕಳೆದ ಆರು ವರ್ಷಗಳಲ್ಲಿ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರ ಪರಿಣಾಮವಾಗಿ ಕೊರೋನಾ ಸಾಂಕ್ರಾಮಿಕದ ನಡುವೆಯೂ ಕೃಷಿ ಕ್ಷೇತ್ರ ಬೆಳವಣಿಗೆ ಸಾಧಿಸಿದೆ.

1922 ರಲ್ಲಿ ಮಹಾತ್ಮ ಗಾಂಧಿ ಪ್ರಾರಂಭಿಸಿದ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ ಸ್ವಾತಂತ್ರ್ಯ ಹೋರಾಟಗಾರರ ಗುಂಪಿನ ಮೇಲೆ ಪೋಲೀಸರು ಗುಂಡು ಹಾರಿಸಿದ್ದರು. ಅವರಲ್ಲಿ ಅನೇಕರು ಸಾವನ್ನಪ್ಪಿದರು. ಪ್ರತೀಕಾರವಾಗಿ, ಪ್ರತಿಭಟನಾಕಾರರು ಚೌರಿ ಚೌರಾ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿ, ಅನೇಕರನ್ನು ಕೊಂದರು, ಗಾಯಗೊಳಿಸಿದರು. ಹಿಂಸಾ ಸ್ವರೂಪ ತಳೆದ ಅಸಹಕಾರ ಚಳವಳಿಯನ್ನು ಮಹಾತ್ಮ ಗಾಂಧಿ ಕೈಬಿಟ್ಟರು.