ಭೂಪಾಲ್ : ಬಡವರು ಮತ್ತು ಆರ್ಥಿಕ ದುರ್ಬಲರನ್ನು ಸಬಲೀಕರಣಗೊಳಿಸುವ ಮೂಲಕ ಬಡತನವನ್ನು ನಿರ್ಮೂಲನೆ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಪ್ರಧಾನಮಂತ್ರಿ ಆವಾಸ್ ಯೋಜನೆ(ಪಿಎಂಎವೈ)ಯು ಬಡವರು ಮತ್ತು ಆರ್ಥಿಕ ದುರ್ಬಲರನ್ನು ಸಬಲೀ ಕರಣಗೊಳಿಸುವ ಉದಾತ ಉದ್ದೇಶ ಹೊಂದಿದೆ. ಮಧ್ಯಪ್ರದೇಶದ ಗ್ರಾಮಗಳಲ್ಲಿ ಪಿಎಂಎವೈ ಯೋಜನೆಯಡಿ ನಿರ್ಮಿಸಲಾದ ಸುಮಾರು 1.80 ಲಕ್ಷ ಮನೆಗಳ ಗೃಹಪ್ರವೇಶ ಸಮಾರಂಭಕ್ಕೆ ವಿಡಿಯೋ ಲಿಂಕ್ ಮೂಲಕ ಚಾಲನೆ ನೀಡಿದರು.
ದೇಶದಲ್ಲಿನ ಬಡತನವನ್ನು ನಿರ್ಮೂಲನೆ ಮಾಡಬೇಕಾದರೆ ಬಡವರು, ಆರ್ಥಿಕ ದುರ್ಬಲರನ್ನು ಸಬಲೀ ಕರಣಗೊಳಿಸಬೇಕು. ಇದಕ್ಕಾಗಿ ಸರ್ಕಾರಗಳು, ಸಂಘಸಂಸ್ಥೆಗಳು ಮತ್ತು ಉದ್ಯಮಿಗಳು ನೆರವಾಗಬೇಕು.
ಈ ನಿಟ್ಟಿನಲ್ಲಿ, ಪ್ರಧಾನಮಂತ್ರಿ ಆವಾಸ್ ಯೋಜನೆ ಕಾರ್ಯೋನ್ಮುಖವಾಗಿದೆ ಎಂದು ಮೋದಿ ಹೇಳಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್, ಸಂಪುಟ ಸಹೋದ್ಯೋಗಿಗಳು, ಕೇಂದ್ರ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.