Sunday, 15th December 2024

ವಿಶ್ವ ನಾಯಕರಲ್ಲಿ ಜಾಗತಿಕ ರೇಟಿಂಗ್‌: ನರೇಂದ್ರ ಮೋದಿಗೆ ಅಗ್ರಸ್ಥಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶೇ.72ರಷ್ಟು ಅನುಮೋದನೆಯೊಂದಿಗೆ ವಿಶ್ವ ನಾಯಕರಲ್ಲಿ ಜಾಗತಿಕ ರೇಟಿಂಗ್‌ನಲ್ಲಿ ಅಗ್ರಸ್ಥಾನದಲ್ಲಿ ದ್ದಾರೆ.

ಪಿಎಂ ಮೋದಿ ಅವರು ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಪಟ್ಟಿಯಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರಂತಹ ವಿಶ್ವ ನಾಯಕರನ್ನು ಹಿಂದಿಕ್ಕಿ ಅತ್ಯಧಿಕ ರೇಟಿಂಗ್ ಗಳಿಸಿದ್ದಾರೆ.

13 ವಿಶ್ವ ನಾಯಕರ ಪಟ್ಟಿಯಲ್ಲಿ, US ಅಧ್ಯಕ್ಷ ಜೋ ಬೈಡನ್ ಶೇ.41ರಷ್ಟು ರೇಟಿಂಗ್‌ನೊಂದಿಗೆ ಆರನೇ ಸ್ಥಾನ ದಲ್ಲಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರು 41 ಪ್ರತಿಶತದೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ, ಕೆನಡಾದ ಅಧ್ಯಕ್ಷ ಜಸ್ಟಿನ್ ಟ್ರುಡೊ ನಂತರದ ಸ್ಥಾನದಲ್ಲಿದ್ದಾರೆ.

ಪಿಎಂ ನರೇಂದ್ರ ಮೋದಿ 13 ವಿಶ್ವ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಮತ್ತು ಮೆಕ್ಸಿಕೊ ಅಧ್ಯಕ್ಷ ಒಬ್ರಡಾರ್ 64 ಪ್ರತಿಶತ, ಇಟಲಿ ಪಿಎಂ ಮಾರಿಯೋ ಡ್ರಾಘಿ ಶೇ.57, ಫ್ಯೂಮಿಯೊ ಕಿಶಿಡಾ ಶೇ.47 ರೇಟಿಂಗ್ ಪಡೆದಿದ್ದಾರೆ.

ಸತತ ಮೂರನೇ ವರ್ಷ ಪಿಎಂ ನರೇಂದ್ರ ಮೋದಿ ಅವರು, ವಿಶ್ವದ ಇತರ ಎಲ್ಲ ನಾಯಕರಿಗಿಂತ ಹೆಚ್ಚಿನ ರೇಟಿಂಗ್ ಗಳಿಸುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.