Friday, 22nd November 2024

Modi Laddu: ದೀಪಾವಳಿಗೆ ಸಿದ್ಧವಾಗುತ್ತಿದೆ ಮೋದಿ ಲಡ್ಡು!

Modi Laddu

ಭಾಗಲ್ಪುರ: ದೀಪಾವಳಿ (deepavali) ಹಬ್ಬಕ್ಕಾಗಿ ವಿಶೇಷ ಲಡ್ಡುವೊಂದು ವಾರಣಾಸಿಯ (varanasi) ಸುಗಂಧದೊಂದಿಗೆ ಬಿಹಾರದಲ್ಲಿ (bihar) ಸಿದ್ಧವಾಗುತ್ತಿದೆ. ಇದರ ಹೆಸರು ಮೋದಿ ಲಡ್ಡು (Modi Laddu). ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಅಭಿಮಾನಿ, ಸಿಹಿ ತಿನಿಸು ವ್ಯಾಪಾರಿ ಸಂಜೀವ್ ಅಲಿಯಾಸ್ ಲಾಲು ಶರ್ಮಾ ಅವರು ಈ ಲಡ್ಡುವನ್ನು ತಯಾರಿಸುತ್ತಿದ್ದಾರೆ.

ಲಾಲು ಶರ್ಮಾ ಅವರು ಮೋದಿಯವರು ಪ್ರಧಾನಿಯಾದ ವರ್ಷವೇ ಅವರ ಗೌರವಾರ್ಥವಾಗಿ ‘ಮೋದಿ ಲಡ್ಡು’ ಎಂಬ ರಾಜಮನೆತನದ ಲಡ್ಡನ್ನು ತಯಾರಿಸಿದ್ದರು. ಇದನ್ನು ಶುದ್ಧ ಕೇಸರಿ, ದೇಸಿ ತುಪ್ಪ, ಪಿಸ್ತಾ, ಬಾದಾಮಿ ಜೊತೆಗೆ ರೋಸ್ ವಾಟರ್ ಮತ್ತು ಜ್ಯೂಸ್ ಬಳಸಿ ತಯಾರಿಸಲಾಗಿತ್ತು. ಬಳಿಕ ಪ್ರಧಾನಿ ಮೋದಿಯವರು ಸತತ ಮೂರು ಬಾರಿ ಅಧಿಕಾರಕ್ಕೆ ಬಂದಾಗಲೂ ಇವರು ತಯಾರಿಸಿದ ಮೋದಿ ಲಡ್ಡು ಅಪಾರ ಜನಪ್ರಿಯತೆ ಗಳಿಸಿತ್ತು. ಹೀಗಾಗಿ ಇವರನ್ನು ಮೋದಿ ಲಡ್ಡು ತಯಾರಕರು ಎಂಬ ಹೆಸರಿನಿಂದಲೇ ಕರೆಯಲಾಗುತ್ತಿದೆ.

ಮೋದಿ ಲಡ್ಡುವಿನ ಅಭಿಮಾನಿಗಳು ದೇಶಾದ್ಯಂತ ಹರಡಿಕೊಂಡಿದ್ದಾರೆ. ಈ ದೀಪಾವಳಿಗೆ ನಾವು ಈ ಲಡ್ಡನ್ನು ದೇಶಾದ್ಯಂತ ನೀಡಲು ಸಾಧ್ಯವಿಲ್ಲ. ಆದರೆ ಹೆಚ್ಚಿನ ಜನರಿಗೆ ತಲುಪಿಸಲು ಪ್ರಯತ್ನಿಸುತ್ತೇನೆ ಎಂದು ಲಾಲು ಶರ್ಮಾ ಹೇಳಿದ್ದಾರೆ.

ಮೋದಿ ಲಡ್ಡು ಅದರ ಶುದ್ಧತೆ ಮತ್ತು ರುಚಿಗೆ ಹೆಸರುವಾಸಿಯಾಗಿದೆ. ನಾನು ವಾರಣಾಸಿಯಿಂದ ಬಂದವನಾಗಿರುವುದರಿಂದ ಮೋದಿ ಲಡ್ಡುವಿನಲ್ಲಿ ಗಂಗಾಜಲದ ಬಳಕೆಯು ನಮ್ಮೊಂದಿಗೆ ಭಾವನಾತ್ಮಕ ಬಾಂಧವ್ಯವನ್ನು ಹೊಂದುವಂತೆ ಮಾಡಿದೆ. ಈ ಲಡ್ಡುವಿನ ಪರಿಮಳ ದೇಶಾದ್ಯಂತ ಹರಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಹಸಿರು ಬಣ್ಣದ ಶುದ್ಧತೆಯ ಪಿಸ್ತಾ, ರಾಷ್ಟ್ರದ ಮೇಲಿನ ಪ್ರೀತಿಯ ಭಾವನೆಯಿಂದ ಪ್ರೇರಿತವಾದ ಬಾದಾಮಿಯ ಮೇಲಿನ ಭಾವನೆಯಿಂದ ಸ್ಫೂರ್ತಿ ಪಡೆದು ಇದನ್ನು ಸಿದ್ಧಪಡಿಸಿರುವುದಾಗಿ ಹೇಳಿರುವ ಲಾಲೂ ಶರ್ಮಾ, ಈ ಸಿಹಿಯನ್ನು ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ನನ್ನ ಮುಖ್ಯ ಉದ್ದೇಶ ಲಾಭ ಗಳಿಸುವುದು ಮಾತ್ರವಲ್ಲ, ಗಂಗಾ-ಜಮುನಾ-ಸರಸ್ವತಿ ನಾಗರಿಕತೆಯನ್ನು ಹರಡಲು ಬಯಸುವುದಾಗಿದೆ ಎಂದಿದ್ದಾರೆ.

Ratan Tata: ರತನ್‌ ಟಾಟಾ ಆಸ್ತಿಯಲ್ಲಿ ಪ್ರೀತಿಯ ಶ್ವಾನಕ್ಕೂ ಪಾಲು; 10000 ಕೋಟಿ ರೂ. ವಿಲ್‌ನಲ್ಲಿ ಏನೇನಿದೆ?

ಇಲ್ಲಿ ತಯಾರಾದ ವಿವಿಧ ರೀತಿಯ ಸಿಹಿತಿಂಡಿಗಳಲ್ಲಿ ಸನಾತನ ಸಂಸ್ಕೃತಿ ಇದೆ ಸಿಹಿಯಲ್ಲಿ ನೈಸರ್ಗಿಕ ಬಣ್ಣ ಮತ್ತು ಸಿಹಿಯನ್ನು ಮಾತ್ರ ಬಳಸಿದ್ದೇನೆ. ಹೀಗಾಗಿ ಜನರು ಶುದ್ಧ ಸಿಹಿ ತಿಂಡಿಗಳನ್ನೇ ಇಲ್ಲಿ ಖರೀದಿಸಿ ತಿನ್ನುತ್ತಾರೆ ಎಂದಿದ್ದಾರೆ ಶರ್ಮಾ. ದೇವರ ಪ್ರಸಾದದ ರೂಪದಲ್ಲಿರುವ ಈ ಸಿಹಿಯನ್ನು ದೇವರು ತಿಂದರೂ ಶುದ್ಧವಾಗಿರಬೇಕು, ದೇವರ ಭಕ್ತರು ತಿಂದರೂ ಶುದ್ಧವಾಗಿರಬೇಕು ಎನ್ನುವ ಭಾವನೆಯಲ್ಲಿ ಈ ಸಿಹಿ ತಿನಿಸಿಗಳನ್ನು ಸಿದ್ದಪಡಿಸಲಾಗಿದೆ ಎನ್ನುತ್ತಾರವರು.