Monday, 16th September 2024

594 ಕಿ.ಮೀ ಉದ್ದದ ಗಂಗಾ ಎಕ್ಸ್’ ಪ್ರೆಸ್ ವೇಗೆ ಮೋದಿ ಶಂಕುಸ್ಥಾಪನೆ

Ganga Expressway

ಲಖ್ನೋ: ಉತ್ತರಪ್ರದೇಶದ ಷಹಜಹಾನ್‍ಪುರದಲ್ಲಿ 594 ಕಿ.ಮೀ ಉದ್ದದ ಗಂಗಾ ಎಕ್ಸ್’ ಪ್ರೆಸ್ ವೇ ಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿ ದರು.

ಆರು ಪಥಗಳ ಎಕ್ಸ್’ ಪ್ರೆಸ್ ವೇ 36,230 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಇದು ಉತ್ತರಪ್ರದೇಶದ ಅತಿ ಉದ್ದದ ಎಕ್ಸ್‍ಪ್ರೆಸ್ ವೇ ಪ್ರಯಾಗ್ ರಾಜ್‍ನ ಜುದಾಪುರ್ ದಂಡು ಗ್ರಾಮದವರೆಗೆ ವಿಸ್ತರಣೆಯಾಗಲಿದೆ. ಉತ್ತರಪ್ರದೇಶದ ಮೂಲೆ ಮೂಲೆಯೂ ಲಖ್ನೋ ಮತ್ತು ದೆಹಲಿಗೆ ಸಂಪರ್ಕ ಗೊಳ್ಳುತ್ತದೆ.

ಗಂಗಾ ಎಕ್ಸ್’ ಪ್ರೆಸ್ ಹೆದ್ದಾರಿಯ ವಿಶೇಷತೆಗಳು:
*ಎಕ್ಸ್’ ಪ್ರೆಸ್ ವೇ ಹಾಪುರ್, ಬುಲಂದ್ ಷಹರ್, ಅಮ್ರೋಹಾ, ಸಂಭಾಲ್, ಬದೌನ್, ಷಹಜಹಾನ್‍ಪುರ, ಹರ್ದೋಯಿ, ಉನ್ನಾವ್, ರಾಯ್ ಬರೇಲಿ ಮತ್ತು ಪ್ರತಾಪ್‍ಗಢ ಸೇರಿದಂತೆ ಹನ್ನೆರಡು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ.
*ಹೆದ್ದಾರಿಯಲ್ಲಿ 17 ಸ್ಥಳಗಳಲ್ಲಿ ಅಂತರ ಬದಲಾವಣೆ ಸೌಲಭ್ಯಗಳು ಇರಲಿವೆ.
*3.5 ಕಿ.ಮೀ ಉದ್ದದ ಏರ್‍ಸ್ಟ್ರಿಪ್‍ನ್ನು ಸಹ ಷಹಜಹಾನ್‍ಪುರದಲಿ ನಿರ್ಮಿಸಲಾಗುವುದು.
*ಹೆದ್ದಾರಿಯುದ್ದಕ್ಕೂ ಸುಮಾರು 18,55,000 ಮರದ ಸಸಿಗಳನ್ನು ನೆಡಲಾಗುವುದು.
*ಕೃಷಿ, ಪ್ರವಾಸೋದ್ಯಮ ಮತ್ತು ಕೈಗಾರಿಕೋದ್ಯಮಗಳಿಗೆ ರೋಹಿಲ್‍ಖಂಡ್ ಮತ್ತು ವಿಂಧ್ಯ ಪ್ರದೇಶಗಳಲ್ಲಿ ಉತ್ತೇಜನ ಸಿಗಲಿದೆ.
*ಗಂಗಾ ಎಕ್ಸ್’ ಪ್ರೆಸ್ ಹೆದ್ದಾರಿಯು ಆಹಾರ ಸಂಸ್ಕರಣಾ ಘಟಕಗಳು, ದಾಸ್ತಾನು ಮಳಿಗೆಗಳು, ಕೃಷಿ ಮಾರುಕಟ್ಟೆಗಳು ಮತ್ತು ಕ್ಷೀರೋತ್ಪನ್ನ ಕೈಗಾರಿಕೆಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ.