Sunday, 15th December 2024

ಕಥೆ ಹೇಳುವ ದೊಡ್ಡ ಪರಂಪರೆ ನಮ್ಮ ದೇಶದಲ್ಲಿದೆ: ಮೋದಿ ಮನ್ ಕೀ ಬಾತ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ‘ಮನ್ ಕೀ ಬಾತ್’ ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿ “ಮಕ್ಕಳಿಗೆ ಕಥೆಯನ್ನು ಹೇಳಬೇಕು. ಕಥೆ ಹೇಳುವ ದೊಡ್ಡ ಪರಂಪರೆ ನಮ್ಮ ದೇಶದಲ್ಲಿದೆ. ರಾಮಾಯಣ, ಪಂಚ ತಂತ್ರದ ಕಥೆಗಳನ್ನು ನಾವು ಕೇಳಿದ್ದೇವೆ. ಅದನ್ನು ಮಕ್ಕಳಿಗೂ ಹೇಳಿಕೊಡಬೇಕು” ಎಂದು ಕರೆ ನೀಡಿದರು.

“ತಮಿಳುನಾಡು ಮತ್ತು ಕೇರಳದಲ್ಲಿ ಮಕ್ಕಳಿಗೆ ಕಥೆ ಹೇಳಿ ಕೊಡುವ ದೊಡ್ಡ ಸಂಪ್ರದಾಯವಿದೆ. ಬೆಂಗಳೂರಿನ ವಿಕ್ರಂ ಶೀಧರ್ ಬಾಪುವಿನ ಕುರಿತ ಕಥೆಗಳನ್ನು ಸಂಗ್ರಹ ಮಾಡಿದ್ದಾರೆ” ಎಂದು ಹೇಳಿದರು.

‘ಬೆಂಗಳೂರು ಸ್ಟೋರಿ ಟೆಲ್ಲಿಂಗ್ ಸೊಸೈಟಿ’ಯ ಅರ್ಪಣಾ ಅತ್ರೇಯ, ಶೈಲಜಾ ಸಂಪತ್, ಸೌಮ್ಯಾ ಶ್ರೀನಿವಾಸನ್, ಅರ್ಪಣಾ ಜೈಶಂಕರ್ ಜೊತೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಕಳೆಯುತ್ತಿರುವ ಹಿನ್ನಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿದಾಯಕ ಕಥೆ ಗಳನ್ನು ಹೇಳಿಕೊಡಬೇಕು. ನೀವೆಲ್ಲರೂ ಈ ಕೆಲಸವನ್ನು ಮಾಡುತ್ತೀರಿ ಎಂಬ ನಂಬಿಕೆ ಇದೆ ಎಂದು ಮೋದಿ ವಿಶ್ವಾಸ ವ್ಯಕ್ತ ಪಡಿಸಿದರು.