Thursday, 31st October 2024

ಆಮ್ಲಜನಕದ ಹೆಚ್ಚಳ, ಲಭ್ಯತೆ ಪರಿಶೀಲನೆಗೆ ಪ್ರಧಾನಿ ಸಭೆ ಇಂದು

ನವದೆಹಲಿ : ದೇಶಾದ್ಯಂತ ವೈದ್ಯಕೀಯ ಆಮ್ಲಜನಕದ ಹೆಚ್ಚಳ ಮತ್ತು ಲಭ್ಯತೆ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉನ್ನತ ಮಟ್ಟದ ಸಭೆ ಸಭೆ ನಡೆಸಲಿದ್ದಾರೆ.

ಕಳೆದ ಏಪ್ರಿಲ್-ಮೇ ತಿಂಗಳಲ್ಲಿ ಎರಡನೇ ಕೋವಿಡ್-19 ಅಲೆಯ ಉತ್ತುಂಗದ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಇದೆ ಎಂದು ಅನೇಕರು ದೂರುತ್ತಿರುವುದರಿಂದ, ಕೇಂದ್ರ ಸರ್ಕಾರವು ತನ್ನ ಉತ್ಪಾದನೆ ಮತ್ತು ಪೂರೈಕೆ ಹೆಚ್ಚಿಸಲು ರಾಜ್ಯಗಳೊಂದಿಗೆ ಸಮನ್ವಯದಿಂದ ಕ್ರಮಗಳನ್ನು ತೆಗೆದುಕೊಳ್ಳು ತ್ತಿದೆ. ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಆತಂಕದ ನಡುವೆ ಮೋದಿ ಈ ನಿಟ್ಟಿನಲ್ಲಿ ಹಲವಾರು ಸಭೆಗಳನ್ನು ನಡೆಸುತ್ತಿದ್ದಾರೆ.