Thursday, 12th December 2024

ಪಂಜಾಬ್‌ ಚುನಾವಣೆ: ಫೆ.14, 16, 17ರಂದು ಪ್ರಧಾನಿ ರ್‍ಯಾಲಿ

 

ಚಂಡೀಗಢ: ಪಂಜಾಬ್‌ನಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪ್ರಚಾರಕ್ಕೆ ಮತ್ತಷ್ಟು ಉತ್ತೇ ಜನ ನೀಡಲು, ಪ್ರಧಾನಿ ನರೇಂದ್ರ ಮೋದಿ ಫೆ.14, 16 ಮತ್ತು 17 ರಂದು ಪಂಜಾಬ್‌ನಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪಂಜಾಬ್ ರಾಜ್ಯದಲ್ಲಿ ಮಾಲ್ವಾ, ದೋಬಾ ಮತ್ತು ಮಾಝಾ ಮೂರು ಪ್ರದೇಶಗಳನ್ನು ಒಳಗೊಂಡ ಮೂರು ಸಾರ್ವಜನಿಕ ರ್‍ಯಾಲಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ.

ಜಲಂಧರ್, ಕಪುರ್ತಲಾ ಮತ್ತು ಬಟಿಂಡಾದ 27 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ವರ್ಚು ವಲ್ ರ್‍ಯಾಲಿಯನ್ನು ರದ್ದುಗೊಳಿಸಿದ ಬಿಜೆಪಿ, ಪ್ರಧಾನಿ ಮೋದಿ ಫೆ.14 ರಂದು ಜಲಂಧರ್‌ನಲ್ಲಿ ಚುನಾವಣಾ ರ್‍ಯಾಲಿ ನಡೆಸಲಿದ್ದಾರೆ ಎಂದು ಹೇಳಿದೆ.

ಲೂಧಿಯಾನ ಮತ್ತು ಫಿರೋಜ್‌ಪುರ ಕ್ಷೇತ್ರಗಳಿಗೆ ಮಂಗಳವಾರ ಪ್ರಧಾನಿ ಮೋದಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈಗ ಪ್ರಧಾನಿ ಮೋದಿ ಪಂಜಾಬ್‌ನಲ್ಲಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಘೋಷಣೆ ಮಾಡಿದೆ.