Saturday, 23rd November 2024

ಟ್ವಿಟರ್‌ನಲ್ಲಿ ಟ್ರೆಂಡ್‌ ಆದ #Bal_Narendra, #LieLikeModi

ನವದೆಹಲಿ: ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ತಾನು ಶುಕ್ರವಾರ ಬಾಂಗ್ಲಾದ 50ನೇ ವರ್ಷದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಾಡಿರುವ ಭಾಷಣ ನಗೆಪಾಟಲಿಗೀಡಾಗಿದೆ.

ನನ್ನ ಮೊದಲ ಪ್ರತಿಭಟನೆಗಳಲ್ಲಿ ಬಾಂಗ್ಲಾ ವಿಮೋಚನೆ ಪರ ಹೋರಾಟವೂ ಒಂದು. ನಾನು ಮತ್ತು ನನ್ನ ಸಹೋದ್ಯೋಗಿಗಳು ಭಾರತದಲ್ಲಿ ಸತ್ಯಾಗ್ರಹ ನಡೆಸಿದ್ದೆವು. ಆಗ ನಾನು 20ರ ಹರೆಯದಲ್ಲಿದ್ದೆ. ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟದ ಈ ಸತ್ಯಾಗ್ರಹದ ವೇಳೆ ನನಗೆ ಜೈಲಿಗೆ ಹೋಗುವ ಸಂದರ್ಭವೂ ಬಂದಿತ್ತು” ಎಂದು ಹೇಳಿದ್ದರು. ಈ ಹೇಳಿಕೆ ಸಾಕಷ್ಟು ಟೀಕೆ, ಅಪಹಾಸ್ಯಕ್ಕೂ ಒಳಗಾಗಿದೆ. “LieLikeModi” ಹ್ಯಾಷ್‌ಟ್ಯಾಗ್ ಕೂಡ ಟ್ವಿಟ್ಟರ್‌ನಲ್ಲಿ ಸೃಷ್ಟಿಯಾಗಿದೆ. “ಬಾಲ ನರೇಂದ್ರ ಮೋದಿ” ಎಂದು ಹಲವು ಟ್ರೋಲ್‌ಗಳು ಹುಟ್ಟಿಕೊಂಡಿವೆ.

“ಅಪ್ಪಿತಪ್ಪಿಯೂ ಮೋದಿ ಸತ್ಯ ಹೇಳುವುದಿಲ್ಲ”

ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ “ಅಪ್ಪಿತಪ್ಪಿಯೂ ಮೋದಿ ಸತ್ಯ ಹೇಳುವುದಿಲ್ಲ” ಎಂದು ವ್ಯಂಗ್ಯ ಮಾಡಿದ್ದಾರೆ. ಅವರ ಬಂಧನದ ಬಗ್ಗೆ ಎಲ್ಲಿಯಾದರೂ ದಾಖಲೆಯಿದೆಯೇ?” ಎಂದು ಮಾಜಿ ಐಎಫ್‌ಎಸ್ ಅಧಿಕಾರಿ ಕೆ.ಸಿ. ಸಿಂಗ್ ಪ್ರಶ್ನಿಸಿದ್ದಾರೆ. 1971ರಲ್ಲಿ ಬಿಕ್ಕಟ್ಟು ಆರಂಭವಾಯಿತು. ಭಾರತಕ್ಕೆ ನಿರಾಶ್ರಿತರು ಬಂದರು. ಯುದ್ಧ ಚಿಕ್ಕ ದಾಗಿದ್ದು ಹಾಗೂ ಗೆದ್ದಿತು. ಹಾಗಿದ್ದಾಗ ಪ್ರಧಾನಿಯವರ ಸಂಘರ್ಷ ಏನಿತ್ತು? ಎಂದು ಪ್ರಶ್ನಿಸಿದ್ದಾರೆ.

ಮೋದಿ ಅವರ ಹೇಳಿಕೆ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ವಾಗ್ದಾಳಿ ಆರಂಭವಾಗಿದೆ. ಬಿಜೆಪಿ ಆಕ್ರೋಶಗೊಂಡಿದ್ದು, ಮೋದಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ಮೋದಿ ಅವರು ಬಾಂಗ್ಲಾದೇಶದ ಮಾನ್ಯತೆಗಾಗಿ ಜನ ಸಂಘ ಆಯೋಜಿಸಿದ್ದ ಸತ್ಯಾಗ್ರಹದ ಭಾಗವಾಗಿರುವುದು ಹೌದು ಎಂದು ಸಮರ್ಥಿಸಿಕೊಂಡಿದೆ.

ಗುರುತ್ವಾಕರ್ಷಣ ಆಲೋಚನೆಯನ್ನು ನ್ಯೂಟನ್‌ಗೆ ನೀಡಿದ್ದೂ ಮೋದಿ ಎಂದು ಕೆಲವರೆಂದರೆ, ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧಿ ಯವರನ್ನು ಮುನ್ನಡೆಸಿದ್ದೂ ಬಾಲ ನರೇಂದ್ರ ಎಂದು ಕೆಲವರು ಪೋಸ್ಟ್ ಹಂಚಿಕೊಂಡಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily