ಅಹಮದಾಬಾದ್: ಎರಡು ದಿನಗಳ ಗುಜರಾತ್ ಪ್ರವಾಸಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಅಹಮದಾಬಾದ್ ಗೆ ಆಗಮಿಸಿದ್ದಾರೆ.
ಮೋದಿಯವರನ್ನು ಮುಖ್ಯಮಂತ್ರಿ ವಿಜಯ್ ರೂಪಾಣಿ ಮತ್ತು ರಾಜ್ಯಪಾಲ ಆಚಾರ್ಯ ದೇವವ್ರತ ಬರಮಾಡಿಕೊಂಡರು. ಕೊರೋನಾ ವೈರಸ್ ಹಾವಳಿ ದೇಶಕ್ಕೆ ಅಪ್ಪಳಿಸಿದ ನಂತರ ಮೋದಿ, ಇದೇ ಮೊದಲ ಬಾರಿಗೆ ತಮ್ಮ ತವರು ನೆಲಕ್ಕೆ ಭೇಟಿ ನೀಡು ತ್ತಿದ್ದಾರೆ.
ವಿಮಾನ ನಿಲ್ದಾಣದಿಂದ ನೇರವಾಗಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಕೇಶುಬಾಯಿ ಪಟೇಲ್ ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಕೇಶುಬಾಯಿ ಪಟೇಲ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಇತ್ತೀಚೆಗೆ ನಿಧನರಾದ ಗುಜರಾತಿ ಸಿನೆಮಾ ಸೂಪರ್ ಸ್ಟಾರ್ ನರೇಶ್ ಕನೊಡಿಯಾ ಮತ್ತು ಅವರ ಸಂಗೀತ ನಿರ್ದೇಶಕ ಸೋದರ ಮಹೇಶ್ ಕನೊಡಿಯಾ ಕುಟುಂಬಸ್ಥರನ್ನು ಸಹ ಭೇಟಿ ಮಾಡಿ ಸಾಂತ್ವನ ಹೇಳಿದರು.
ರಾಜ್ಯ ಭೇಟಿ ವೇಳೆ ಮೋದಿಯವರು ಗಾಂಧಿನಗರ ಹೊರವಲಯದಲ್ಲಿ ಸೋದರ ಪಂಕಜ್ ಮೋದಿಯವರೊಂದಿಗೆ ನೆಲೆಸಿರುವ ತಮ್ಮ ತಾಯಿ ಹಿರಬಾ ಅವರನ್ನು ಸಹ ಭೇಟಿ ಮಾಡಿ ಮೋದಿಯವರು ಯೋಗಕ್ಷೇಮ ವಿಚಾರಿಸಲಿದ್ದಾರೆ ಎಂದು ತಿಳಿದುಬಂದಿದೆ.
ನಾಳೆ ಪ್ರಧಾನಿ, ಕೆವಾಡಿಯಾವನ್ನು ಅಹಮದಾಬಾದ್‌ನೊಂದಿಗೆ ಸಂಪರ್ಕಿಸುವ ಸೀಪ್ಲೇನ್ ಸೇವೆಯನ್ನು ಸಹ ಉದ್ಘಾಟಿಸ ಲಿದ್ದಾರೆ.