Wednesday, 18th September 2024

ಅವಹೇಳನಕಾರಿ ಟ್ವೀಟ್​ ವಿವಾದ: ದ್ವೀಪರಾಷ್ಟ್ರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರ ಕುರಿತು ಮಾಲ್ಡೀವ್ಸ್ ಸಚಿವ ಮಾಡಿದ ಅವಹೇಳನಕಾರಿ ಟ್ವೀಟ್​ ಭಾರೀ ವಿವಾದಕ್ಕೆ ತಿರುಗಿದ್ದು, ದ್ವೀಪರಾಷ್ಟ್ರದ ವಿರುದ್ಧ ದೇಶವ್ಯಾಪಿ ತೀವ್ರ ಆಕ್ರೋಶ ವ್ಯಕ್ತವಾಯಿತು.

ಈ ವಿವಾದಗಳ ಬೆನ್ನಲ್ಲೇ ಟ್ರಾವೆಲ್ ಏಜೆನ್ಸಿ ‘ಈಸ್​ ಮೈ ಟ್ರಿಪ್’,​ ಮಾಲ್ಡೀವ್ಸ್‌ನತ್ತ ಸಾಗಬೇಕಿದ್ದ ತನ್ನೆಲ್ಲಾ ವಿಮಾನದ ಬುಕಿಂಗ್ಸ್​ಗಳನ್ನು ಸ್ಥಗಿತಗೊಳಿಸಿದೆ.

ಕಳೆದ 48 ಗಂಟೆಗಳಲ್ಲಿ ಅನೇಕ ಭಾರತೀಯರು ಮಾಲ್ಡೀವ್ಸ್​ಗೆ ತೆರಳಲು ಮಾಡಿದ್ದ ಬುಕಿಂಗ್ ಅನ್ನು ವ್ಯಾಪಕವಾಗಿ ರದ್ದುಗೊಳಿಸಿದ್ದು, ನಮ್ಮ ಭಾರತ ವನ್ನು ದ್ವೇಷಿಸುವ ದೇಶಕ್ಕೆ ಹೋಗಲು ಭಾರೀ ಹಣವನ್ನು ಖರ್ಚು ಮಾಡುವುದರಲ್ಲಿ ಅರ್ಥವಿಲ್ಲ ಎಂದು ಎಕ್ಸ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಪ್ರಧಾನಿಗಳು ಲಕ್ಷದ್ವೀಪ ಭೇಟಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳು ವ್ಯಾಪಕವಾಗಿ ಹರಿದಾಡಿದ್ದು, ಇದನ್ನು ಗಮನಿಸಿದ ಭಾರತೀಯ ಆನ್‌ಲೈನ್ ಟ್ರಾವೆಲ್ ಏಜೆನ್ಸಿ ‘ಈಸ್​ ಮೈ ಟ್ರಿಪ್’ ಮಾಲ್ಡೀವ್ಸ್‌ಗೆ ಹೋಗಬೇಕಿದ್ದ ಎಲ್ಲಾ ವಿಮಾನಗಳ ಬುಕಿಂಗ್​ಗಳನ್ನು ಇದೀಗ ದಿಢೀರ್​ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ.

Leave a Reply

Your email address will not be published. Required fields are marked *