Thursday, 12th December 2024

ಚುನಾವಣೆ ಗೆಲ್ಲಲಾಗದವರು ರಾಜ್ಯಸಭೆ ಮೂಲಕ ಸಂಸತ್‌ ಪ್ರವೇಶ: ಮೋದಿ ಲೇವಡಿ

ಜಾಲೋರ್​: ನೇರವಾಗಿ ಚುನಾವಣೆ ಗೆಲ್ಲಲಾಗದವರು ರಾಜಸ್ಥಾನಕ್ಕೆ ಬಂದು ರಾಜ್ಯಸಭೆ ಮೂಲಕ ಸಂಸತ್ತು ಪ್ರವೇಶಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.
ರಾಜಸ್ಥಾನದ ಜಾಲೋರ್​ನಲ್ಲಿ ಚುನಾವಣಾ ಪ್ರಚಾರ ಮಾಡುವ ವೇಳೆ ಮಾತನಾಡಿದ ಮೋದಿ, ರಾಜಸ್ಥಾನದಿಂದ ರಾಜ್ಯಸಭೆ ಮೂಲಕ ಸಂಸತ್ ಪ್ರವೇಶಿಸಿ ವೇಣುಗೋಪಾಲ್, ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರನ್ನು ಟೀಕಿಸಿದ್ದಾರೆ.

ಮಾಜಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ 2004ರಿಂದ 2024ರವರೆಗೂ ರಾಯ್​ಬರೇಲಿ ಕ್ಷೇತ್ರದಿಂದ ಗೆದ್ದು ಸಂಸತ್ತಿಗೆ ಹೋಗಿದ್ದರು. ಈ ಬಾರಿ ಅವರು ರಾಯ್​ಬರೇಲಿಯಲ್ಲಿ ಸ್ಪರ್ಧಿಸುತ್ತಿಲ್ಲ. ರಾಜ್ಯಸಭೆ ಮೂಲಕ ಸಂಸತ್ ಪ್ರವೇಶಿಸಿದ್ದಾರೆ.

ಮಾಜಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಳೆದ 20 ವರ್ಷದಿಂದ ರಾಯ್​ಬರೇಲಿ ಕ್ಷೇತ್ರದಲ್ಲಿ ಗೆಲ್ಲುತ್ತಾ ಬಂದಿದ್ದವರು ಈ ಬಾರಿ ರಾಜಸ್ಥಾನದಿಂದ ರಾಜ್ಯಸಭೆಗೆ ಪ್ರವೇಶ ಮಾಡಿದ್ದಾರೆ. ಈ ರಾಜ್ಯದಿಂದ ರಾಜ್ಯಸಭೆಗೆ ಹೋದವರು ರಾಜ್ಯದ ಜನರಿಗಾಗಿ ಏನೂ ಕೆಲಸ ಮಾಡಲಿಲ್ಲ ಎಂದೂ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನದಲ್ಲಿ 25 ಲೋಕಸಭಾ ಕ್ಷೇತ್ರಗಳಲ್ಲಿದ್ದು 12 ಸ್ಥಾನಗಳಿಗೆ ಏ.19ರಂದು ಮತದಾನವಾಗಿತ್ತು. ಏ.26ರಂದು ನಡೆಯುವ ಎರಡನೇ ಹಂತದ ಚುನಾವಣೆಯಲ್ಲಿ ಉಳಿದ 13 ಸ್ಥಾನಗಳಿಗೆ ಮತದಾನವಾಗಲಿದೆ.