Thursday, 19th September 2024

ಪ್ರಧಾನಿ ಮೋದಿ ಎರಡು ದಿನಗಳ ಗುಜರಾತ್ ಪ್ರವಾಸ ಆರಂಭ

ದೇಶದ ಮೊಟ್ಟಮೊದಲ ಸಮುದ್ರ ವಿಮಾನ ಸೇವೆಗೆ ಚಾಲನೆ

ಸರ್ದಾರ್​ ಪಟೇಲ್​ ಜಿಯೋಲಾಜಿಕಲ್​ ಪಾರ್ಕ್​ ಉದ್ಘಾಟನೆ

ಅಹಮದಾಬಾದ್: ಶುಕ್ರವಾರ ಮತ್ತು ಶನಿವಾರ ಪ್ರಧಾನಿ ಮೋದಿ ಗುಜರಾತ್​​ ಪ್ರವಾಸ ಕೈಗೊಂಡರು. ಈ ವೇಳೆ, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೆವಾಡಿಯಾ ಸಮಗ್ರ ಅಭಿವೃದ್ಧಿ ಭಾಗವಾಗಿ ಏಕ್ತಾ ಕೂಸ್​​​ ಸೇವೆಯ ಪ್ರತಿಮೆ ಟು ಯೂನಿಟಿ, ಅಲ್ಲಿನ ಏಕ್ತಾ ಮಾಲ್ ಮತ್ತು ಮಕ್ಕಳ ನ್ಯೂಟ್ರಿಷನ್ ಪಾರ್ಕ್ ಉದ್ಘಾಟನೆಯೂ ಸೇರಿವೆ. ಸ್ಟ್ರಾಚು ಆಫ್​ ಯುನಿಟಿಗೆ ನಮೋ ಭೇಟಿ ನೀಡಲಿ ದ್ದಾರೆ.

ರಾಷ್ಟ್ರೀಯ ಏಕತೆ ದಿನಾಚರಣೆ ( ಸರ್ದಾರ್​ ವಲ್ಲಭಭಾಯಿ ಪಟೇಲ್ ಜನ್ಮ ದಿವ) ಸಂದರ್ಭದಲ್ಲಿ ನಮೋ ಪ್ರವಾಸ ಕೈಗೊಂಡಿ ದ್ದು, ಅ. 31ರಂದು ಪಟೇಲ್​ ಅವರ ಪ್ರತಿಮೆಗೆ ಪುಪ್ಪನಮನ ಸಲ್ಲಿಸಲಿದ್ದಾರೆ. ಗಾಂಧಿನಗರಕ್ಕೆ ತೆರಳಿ ಗುಜರಾತ್​ನ ಮಾಜಿ ಮುಖ್ಯ ಮಂತ್ರಿ ಕೇಶುಭಾಯ್​ ಪಟೇಲ್​ ಅವರ ನಿವಾಸಕ್ಕೆ ತೆರಳಿ ಕುಟುಂಬದವರನ್ನು ಭೇಟಿಯಾಗಲಿದ್ದಾರೆ. ಬಳಿಕ ಕೆವಾಡಿಯಾಕ್ಕೆ ತೆರಳ ಲಿದ್ದಾರೆ.

ಶನಿವಾರ ಗುಜರಾತ್​ನಲ್ಲಿ ದೇಶದ ಮೊಟ್ಟಮೊದಲ ಸಮುದ್ರ ವಿಮಾನ ಸೇವೆಗೆ ಚಾಲನೆ, ಜಂಗಲ್​ ಸಫಾರಿ ಎಂದು ಜನಪ್ರಿಯ ವಾಗಿರುವ ಸರ್ದಾರ್​ ಪಟೇಲ್​ ಜಿಯೋಲಾಜಿಕಲ್​ ಪಾರ್ಕ್​ ಉದ್ಘಾಟನೆ ಮಾಡಲಿದ್ದಾರೆ. ಕಳೆದ ಮಾರ್ಚ್​ ನಂತರ ಪ್ರಧಾನಿ ಮೋದಿ ಕೈಗೊಳ್ಳುತ್ತಿರುವ ಮೊದಲ ಗುಜರಾತ್ ರಾಜ್ಯದ ಪ್ರವಾಸವಾಗಿದೆ.

Leave a Reply

Your email address will not be published. Required fields are marked *