Sunday, 15th December 2024

ಇಂದಿನಿಂದ ನರೇಂದ್ರ ಮೋದಿ 3.0 ಆರಂಭ

ವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಭಾನುವಾರ ಮೂರನೇ ಬಾರಿಗೆ ಪ್ರಮಾಣ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು.

ಈ ಬಾರಿ ನರೇಂದ್ರ ಮೋದಿ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನಾಯಕರಾಗಿ ಅಧಿಕಾರ ಸ್ವೀಕರಿಸಿರುವುದು ವಿಶೇಷ.

ರಾಷ್ಟ್ರಪತಿ ಭವನದ ಆವರಣದಲ್ಲಿ ಗೋಧೂಳಿ ಮುಹೂರ್ತದಲ್ಲಿ ರಾತ್ರಿ 7.15ಕ್ಕೆ ನಡೆದ ಅದ್ದೂರಿ ಪ್ರಮಾಣವಚನ ಸಮಾರಂಭವನ್ನು ಸ್ಥಳದಲ್ಲಿದ್ದ ವಿದೇಶಿ ಗಣ್ಯರು, ಆಹ್ವಾನಿತರು ಸೇರಿ 8000ದಷ್ಟು ಅತಿಥಿಗಳೊಂದಿಗೆ ಜಗತ್ತು ಕಣ್ತುಂಬಿಕೊಂಡಿತು.

ಪ್ರಧಾನಿ ಮೋದಿ ಅವರು ಈಶ್ವರನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ಅದಾದ ಬಳಿಕ ರಾಜನಾಥ್ ಸಿಂಗ್, ಅಮಿತ್ ಷಾ, ಅವರು ಪ್ರಮಾಣ ಸ್ವೀಕರಿಸಿದರು.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮತ್ತು ಇತರರು ಸೇರಿದಂತೆ ಭಾರತದ ನೆರೆಹೊರೆಯ ಹಲವಾರು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

ಮೋದಿ 3.0 ಸಚಿವ ಸಂಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ 63 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ಪ್ರಧಾನಿ ಮೋದಿ ಸಚಿವ ಸಂಪುಟದಲ್ಲಿ ಬಿಜೆಪಿ ಸದಸ್ಯರು

1 ) ನರೇಂದ್ರ ಮೋದಿ – ಪ್ರಧಾನಿ

2) ರಾಜನಾಥ್ ಸಿಂಗ್

3) ಅಮಿತ್ ಷಾ –

4) ನಿತಿನ್ ಗಡ್ಕರಿ

5) ಅಶ್ವಿನಿ ವೈಷ್ಣವ್

6) ಎಸ್ ಜೈಶಂಕರ್‌

7) ನಿರ್ಮಲಾ ಸೀತಾರಾಮನ್

8) ಜೆಪಿ ನಡ್ಡಾ

9) ಪ್ರಲ್ಹಾದ್ ಜೋಶಿ

10) ಪಿಯೂಷ್ ಗೋಯೆಲ್

11) ಧರ್ಮೇಂದ್ರ ಪ್ರಧಾನ್

12 )ಜ್ಯೋತಿರಾದಿತ್ಯ ಸಿಂಧಿಯಾ

13) ಕಿರಣ್‌ ರಿಜಿಜು’

ಮನ್ಸುಖ್ ಮಾಂಡವೀಯ

ಜಿತೇಂದ್ರ ಸಿಂಗ್

ಬಂಡಿ ಸಂಜಯ್

ಓಂ ಬಿರ್ಲಾ

ಶೋಭಾ ಕರಂದ್ಲಾಜೆ

ವಿ ಸೋಮಣ್ಣ

ಮನೋಹರಲಾಲ್ ಖಟ್ಟರ್‌

ಸರ್ಬಾನಂದ ಸೋನೋವಾಲ್‌

ರಕ್ಷಾ ಖಡ್ಸೆ

ಶ್ರೀನಿವಾಸ್ ವರ್ಮಾ

ರವ್‌ನೀತ್ ಸಿಂಗ್ ಬಿಟ್ಟು

ಸಿಆರ್‌ ಪಾಟೀಲ್‌

ಸುಕಾಂತ ಮಜುಂದಾರ್‌

ಡಾ ಆರ್‌ಎಂಡಿ ಅಗರ್‌ವಾಲ್

ಅನ್ನಪೂರ್ಣ ದೇವಿ

ಅರ್ಜುನ್ ರಾಮ್ ಮೇಘ್ವಾಲ್

ನಿತ್ಯಾನಂದ ರಾಯ್

ಹರ್ಷ ಮಲ್ಹೋತ್ರಾ

ಭಗೀರಥ್ ಚೌಧರಿ

ರಾವ್‌ ಇಂದರ್‌ಜಿತ್‌ ಸಿಂಗ್

ಅಜಯ್ ತಮ್ಟಾ

ಗಜೇಂದ್ರ ಸಿಂಗ್ ಶೇಖಾವತ್‌

ಗಿರಿರಾಜ್ ಸಿಂಗ್‌

ಜಿತಿನ್ ಪ್ರಸಾದ

ಲಕ್ಷ್ಮೀಕಾಂತ ಬಾಜಪೇಯಿ

ಶಿವರಾಜ್ ಸಿಂಗ್ ಚೌಹಾಣ್

ಮೋದಿ ಸಂಪುಟ; ಎನ್‌ಡಿಎ ಮಿತ್ರ ಪಕ್ಷ ಸದಸ್ಯರು

ತೆಲುಗುದೇಶಂ ಪಾರ್ಟಿ

ರಾಮ್ ಮೋಹನ್ ನಾಯ್ಡು

ಚಂದ್ರಶೇಖರ್ ಪೆಮ್ಮಸಾನಿ

ಜೆಡಿಯು

ರಾಮನಾಥ್ ಠಾಕೂರ್‌

ಲಲನ್ ಸಿಂಗ್

ಜೆಡಿಎಸ್

ಎಚ್ ಡಿ ಕುಮಾರಸ್ವಾಮಿ

ಲೋಕ ಜನಶಕ್ತಿ ಪಕ್ಷ (ರಾಮ್‌ ವಿಲಾಸ್ ಪಾಸ್ವಾನ್‌)

ಚಿರಾಜ್ ಪಾಸ್ವಾನ್‌

ಹಿಂದೂಸ್ತಾನಿ ಅವಾಮ್ ಮೋರ್ಚಾ

ಜಿತನ್ ರಾಮ್ ಮಾಂಜಿ

ರಾಷ್ಟ್ರೀಯ ಲೋಕ ದಳ

ಜಯಂತ್ ಚೌಧರಿ

ಅಪ್ನಾ ದಳ್ (ಸೋನೇಲಾಲ್‌)

ಅನುಪ್ರಿಯಾ ಪಟೇಲ್‌

ಶಿವಸೇನಾ (ಶಿಂಧೆ)

ಪ್ರತಾಪ್ ರಾವ್ ಜಾಧವ್

ಆರ್‌ಪಿಐ

ರಾಮದಾಸ್ ಅಠಾವಳೆ

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನ ಗೆದ್ದುಕೊಂಡರೆ, ಮಿತ್ರಪಕ್ಷಗಳು 53 ಸ್ಥಾನಗಳನ್ನು ಗೆದ್ದ ಕಾರಣ, 543 ಸದಸ್ಯರ ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಗೆ 293 ಸದಸ್ಯ ಬಲ ಬಂದಿದೆ. ಇದರಲ್ಲಿ ಎನ್ ಚಂದ್ರಬಾಬು ನಾಯ್ಡು ಅವರ ಟಿಡಿಪಿ (16), ನಿತೀಶ್ ಕುಮಾರ್ ಅವರ ಜೆಡಿಯು (12) ಸೇರಿ 28 ಸ್ಥಾನಗಳನ್ನು ಹೊಂದಿವೆ.