ಬಂಧಿತರನ್ನು ಮೊಹಮ್ಮದ್ ರಿಯಾಜ್, ಸಿ.ಷಫೀಕ್, ಮುನವ್ವರಲಿ ಹಾಗೂ ಮೊಹಮ್ಮದ್ ಶಫೀಕ್ ಎಂದು ಗುರುತಿಸಲಾಗಿದೆ. ಕ್ರಿಪ್ಟೋಕರೆನ್ಸಿ ವ್ಯವಹಾರ ಕುದುರಿಸಿಕೊಡುವುದಾಗಿ ಹಲವರಿಂದ ಹೂಡಿಕೆ ಮಾಡಿಸಿಕೊಂಡು ವಂಚಿಸಿ ರುವ ಆರೋಪ ಈ ನಾಲ್ವರ ಮೇಲಿದೆ, ಹಲವಾರು ಕೋಟಿ ರು ವಂಚಿಸಿರುವುದು ಬೆಳಕಿಗೆ ಬಂದಿದೆ,” ಎಂದು ಕಣ್ಣೂರು ನಗರ ಠಾಣೆ ಹಿರಿಯ ಪೊಲೀಸ್ ಅಧಿಕಾರಿ ಪಿ.ಪಿ.ಸದಾನಂದನ್ ಹೇಳಿದ್ದಾರೆ. ಆದರೆ, ಪ್ರಕರಣದ ಕಿಂಗ್ ಪಿನ್ ನಿಶಾದ್ ಸದ್ಯ ನಾಪತ್ತೆ ಯಾಗಿದ್ದಾನೆ.
ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಸ್ಥಾಪಿಸಿ, ಲಾಂಗ್ ರಿಚ್ ಟೆಕ್ನಾಲಜೀಸ್ ಹೆಸರಿನಲ್ಲಿ ನಕಲಿ ಸಂಸ್ಥೆಯ ಹೆಸರಿನಲ್ಲಿ ವೆಬ್ ತಾಣ ಸೃಷ್ಟಿಸಿ ಹೂಡಿಕೆದಾರ ರನ್ನು ಆಕರ್ಷಿಸಿದ್ದರು. ಆನ್ ಲೈನ್ ಮೂಲಕ ಹೂಡಿಕೆ ಮಾಡಿಸಿಕೊಳ್ಳಲಾಗು ತ್ತಿದ್ದು, ಕ್ರಿಪ್ಟೋಕರೆನ್ಸಿ ಮೂಲಕ ಹೂಡಿಕೆ ಮಾಡಿದರೆ 2 ರಿಂದ 8% ಡಿವಿಡೆಂಡ್ ನೀಡುವುದಾಗಿ ಭರವಸೆ ನೀಡಿದ್ದರು.
ಆರೋಪಿಯೊಬ್ಬನ ಖಾತೆಯಿಂದ 40 ಕೋಟಿ ರು ಹಾಗೂ ಮತ್ತೊಬ್ಬನ ಖಾತೆ ಯಿಂದ 32 ಕೋಟಿ ರು ವರ್ಗಾವಣೆಯಾಗಿದೆ. ಮಿಕ್ಕ ಮೊತ್ತ ನಿಶಾದ್ ಖಾತೆಗೆ ಜಮೆಯಾಗಿದೆ.
ಈ ಹಿಂದೆ ಮಲಪ್ಪುರಂ ಜಿಲ್ಲೆಯಲ್ಲಿ ಮೊರಿಸ್ ಕಾಯಿನ್ ದಂಧೆ ಪತ್ತೆ ಹಚ್ಚಿದ್ದ ಕೇರಳ ಪೊಲೀಸರು, ಆ ಕೇಸಿನ ಫೈಲ್ ತೆಗೆದು ನೋಡಿದಾಗ, ನಿಶಾದ್ ಬ್ಯಾಂಕ್ ಖಾತೆಯಲ್ಲಿದ್ದ 34 ಕೋಟಿ ರು ಜಪ್ತಿಯಾಗಿರುವುದು ಕಂಡು ಬಂದಿದೆ.