Thursday, 19th September 2024

Money Tips: ಸಂಬಳದಲ್ಲಿ ದೊಡ್ಡ ಮೊತ್ತದ ಹಣ ಉಳಿಸಬೇಕೆ? 50:30:20 ನಿಯಮ ಪಾಲಿಸಿ!

Money Tips

ತಿಂಗಳ ಸಂಬಳ (Monthly salary) ಬರುವ ಮುಂಚೆಯೇ ಅದರ ಖರ್ಚಿಗೆ (Monthly expense) ಸಾಕಷ್ಟು ದಾರಿ ಕಾಣುತ್ತದೆ. ಎಷ್ಟೇ ಬಾರಿ ಉಳಿತಾಯ (Saving plan) ಮಾಡಬೇಕು ಎಂಬ ಯೋಚನೆ ಇದ್ದರೂ ಅದು ನೆನಪಾಗುವುದು ಖಾತೆಯಲ್ಲಿ (Bank Account) ಹಣ ಕಡಿಮೆಯಾದ ಮೇಲೆಯೇ… ಇದು ಹೆಚ್ಚಿನ ಉದ್ಯೋಗಿಗಳ ಅಳಲು. ಉಳಿತಾಯ (Money Tips) ಮಾಡಬೇಕು ಎನ್ನುವ ಯೋಚನೆ ಇರುವವರು ಮೊದಲು ಸರಿಯಾದ ಯೋಜನೆ ರೂಪಿಸಬೇಕು.

ಮಾಸಿಕ ಸಂಬಳದಲ್ಲಿ ಉಳಿತಾಯ ಮತ್ತು ಅಗತ್ಯತೆಯನ್ನು ಸೇರಿಸಿ ಯೋಜನೆ ರೂಪಿಸಬೇಕು. ಇದಕ್ಕಾಗಿ 50:30:20 ನಿಯಮವನ್ನು ಅನ್ವಯಿಸಿದರೆ ಭವಿಷ್ಯದ ಬಗ್ಗೆ ಚಿಂತಿಸದೆ ನೆಮ್ಮದಿಯಾಗಿ ಬದುಕಬಹುದು. ಇದು ಸಮತೋಲಿತ, ಆರ್ಥಿಕವಾಗಿ ಸುರಕ್ಷಿತ ಜೀವನವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

Money Tips

ಏನಿದು 50:30:20 ನಿಯಮ?

50:30:20 ನಿಯಮವು ಸರಳವಾದ ಬಜೆಟ್ ವಿಧಾನವಾಗಿದೆ. ವೈಯಕ್ತಿಕ ಹಣಕಾಸುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡಲು ಆದಾಯವನ್ನು ಮೂರು ವಿಶಾಲ ವರ್ಗಗಳಾಗಿ ವಿಂಗಡಿಸಬೇಕು. ಈ ನಿಯಮವನ್ನು ಹಾರ್ವರ್ಡ್ ಮಾಜಿ ಕಾನೂನು ಪ್ರಾಧ್ಯಾಪಕರು, ಅಮೆರಿಕದ ಸೆನೆಟರ್ ಎಲಿಜಬೆತ್ ವಾರೆನ್ ಅವರ ಮಗಳು ಅಮೆಲಿಯಾ ವಾರೆನ್ ತ್ಯಾಗಿ ತಮ್ಮ 2005ರ ಪುಸ್ತಕ “ಆಲ್ ಯುವರ್ ವರ್ತ್: ದಿ ಅಲ್ಟಿಮೇಟ್ ಲೈಫ್ಟೈಮ್ ಮನಿ ಪ್ಲಾನ್”ನಲ್ಲಿ ಮೊದಲ ಬಾರಿ ಪರಿಚಯಿಸಿದರು.

ಈ ನಿಯಮದ ಗುರಿಯು ವೈಯಕ್ತಿಕ ಹಣಕಾಸು ನಿರ್ವಹಣೆಗೆ ಸರಳವಾದ, ಅನುಸರಿಸಲು ಸುಲಭವಾದ ಚೌಕಟ್ಟನ್ನು ಒದಗಿಸುತ್ತದೆ. 50:30:20ರಲ್ಲಿ ಅಗತ್ಯ ವೆಚ್ಚ, ವಿವೇಚನಾ ವೆಚ್ಚ, ಉಳಿತಾಯ ಹೂಡಿಕೆಗಳು ಸೇರಿವೆ.

ಅಗತ್ಯ ವೆಚ್ಚಗಳು ಶೇ. 50

ಅಗತ್ಯ ವೆಚ್ಚಗಳೆಂದರೆ ತಪ್ಪಿಸಲು ಸಾಧ್ಯವಾಗದ ವೆಚ್ಚಗಳಾಗಿವೆ. ಇದು ವಸತಿ ಬಾಡಿಗೆ, ಸಾಲ, ಇಎಂಐ, ವಿದ್ಯುತ್, ನೀರು, ಮೊಬೈಲ್ ಫೋನ್, ಇಂಟರ್ನೆಟ್ ಬಿಲ್‌ಗಳು, ಸಾರ್ವಜನಿಕ ಸಾರಿಗೆ, ಇಂಧನ ವೆಚ್ಚಗಳು, ಮಾಸಿಕ ಆರೋಗ್ಯ ವಿಮಾ ಪ್ರೀಮಿಯಂ ಅಥವಾ ವೈದ್ಯಕೀಯ ವೆಚ್ಚಗಳು ಸೇರಿವೆ. ತಿಂಗಳಿಗೆ 50,000 ರೂ. ಆದಾಯ ಹೊಂದಿರುವವರು ಇದಕ್ಕಾಗಿ ಶೇ. 50ರಷ್ಟು ಅಂದರೆ 25,000 ರೂ. ಅನ್ನು ವಿನಿಯೋಗಿಸಬೇಕಾಗುತ್ತದೆ.

ವಿವೇಚನಾ ವೆಚ್ಚಗಳು ಶೇ. 30

ಕೆಲವೊಂದು ಅಗತ್ಯವಿಲ್ಲದ ವಸ್ತುಗಳಿಗೆ ನಾವು ಮಾಡುವ ಖರ್ಚು ವಿವೇಚನಾ ವೆಚ್ಚಗಳಲ್ಲಿ ಸೇರಿರುತ್ತದೆ. ಹೊರಗೆ ಊಟಕ್ಕೆ ಹೋಗುವುದು, ವಿಹಾರ ಅಥವಾ ಪ್ರವಾಸ, ಚಲನಚಿತ್ರ ವೀಕ್ಷಣೆ, ಸ್ಟ್ರೀಮಿಂಗ್ ಚಂದಾದಾರಿಕೆ, ಬಟ್ಟೆ, ಗ್ಯಾಜೆಟ್‌ ಸೇರಿದಂತೆ ಖರೀದಿಗಳು ಇದರಲ್ಲಿ ಬರುತ್ತದೆ. ಇದಕ್ಕಾಗಿ 50,000 ರೂ. ಆದಾಯವಿರುವವರು ಶೇ. 30ರಷ್ಟು ಅಂದರೆ 15,000 ರೂ. ಮೀಸಲಿಡಬೇಕು.

ಉಳಿತಾಯ ಮತ್ತು ಹೂಡಿಕೆಗಳು ಶೇ. 20

ಇದು ಹಣಕಾಸಿನ ಉತ್ತಮ ಭವಿಷ್ಯವನ್ನು ನಿರ್ಮಿಸಲು ಮಾಡುವಂಥದ್ದು. ಉಳಿತಾಯ ಖಾತೆ ಅಥವಾ ತುರ್ತು ನಿಧಿಗೆ ನಿಯಮಿತ ಠೇವಣಿಯನ್ನು ಇಡುವುದು. ಇದರಲ್ಲಿ ಮ್ಯೂಚುವಲ್ ಫಂಡ್‌, ಷೇರು, ಸ್ಥಿರ ಠೇವಣಿ, ಕನಿಷ್ಠ ಪಾವತಿಯನ್ನು ಮೀರಿದ ಪೂರ್ವ ಪಾವತಿ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ಬಿಲ್‌ಗಳು ಸೇರಿವೆ.
50,000 ರೂ. ಮಾಸಿಕ ಸಂಬಳ ಪಡೆಯುವವರು ಶೇ. 20 ಅಂದರೆ 10,000 ರೂ. ಇದಕ್ಕಾಗಿ ಮೀಸಲಿಡಬೇಕು.

Money Tips

ಅನ್ವಯಿಸುವುದು ಹೇಗೆ?

50:30:20 ನಿಯಮದಲ್ಲಿ ಅಗತ್ಯ ವೆಚ್ಚ 30,000 ರೂ.ನಲ್ಲಿ ಬಾಡಿಗೆ 15,000 ರೂ., ದಿನಸಿಗೆ 10,000 ರೂ., ಸಾರಿಗೆಗೆ 3,000 ರೂ., ಆರೋಗ್ಯ ರಕ್ಷಣೆಗೆ 2,000 ರೂ. ಮೀಸಲಿಡಬೇಕು.

ವಿವೇಚನಾ ವೆಚ್ಚ 15,000 ರೂ. ನಲ್ಲಿ ಊಟ ಮತ್ತು ಮನರಂಜನೆಗೆ 50000 ರೂ., ಪ್ರವಾಸಕ್ಕೆ 6000 ರೂ., ಖರೀದಿಗೆ 4000 ರೂ. ಮೀಸಲಿಡಬೇಕು.

ಉಳಿತಾಯ ಮತ್ತು ಹೂಡಿಕೆಗೆ ಮೀಸಲಿರುವ 12,000 ರೂ. ನಲ್ಲಿ ಮ್ಯೂಚುವಲ್ ಫಂಡ್‌, ಆರ್ ಡಿ, ಎಫ್ ಡಿ, ಚಿನ್ನಕ್ಕೆ 5,000 ರೂ., ತುರ್ತು ಉಳಿತಾಯಕ್ಕೆ 3,000 ರೂ., ಪೂರ್ವಪಾವತಿ ಸಾಲ ಅಥವಾ ಎಸ್ ಐಪಿ ಗೆ 4,000 ರೂ. ಮೀಸಲಿಡಬೇಕು.

50:30:20 ಈ ನಿಯಮವನ್ನು ಅನುಸರಿಸಿದರೆ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಜೀವನವನ್ನು ಹೆಚ್ಚು ಸಂತೋಷವಾಗಿ, ಭವಿಷ್ಯದಲ್ಲಿ ಹಣಕಾಸಿನ ತೊಂದರೆಯ ಚಿಂತೆ ಇಲ್ಲದೆ ಜೀವನ ನಡೆಸಬಹುದು.

50:30:20 ನಿಯಮ ಪಾಲನೆಯಲ್ಲಿ ಇರಲಿ ಎಚ್ಚರಿಕೆ

ಈ ನಿಯಮವು ಸರಳ ಮತ್ತು ಪರಿಣಾಮಕಾರಿ ಬಜೆಟ್ ಮಾರ್ಗದರ್ಶಿಯಾಗಿದೆ. ಆದರೆ ಇದು ಎಚ್ಚರಿಕೆಯನ್ನು ನೀಡುತ್ತದೆ. ಅಗತ್ಯ ವೆಚ್ಚಗಳು ಶೇ. 50ಕ್ಕಿಂತ ಹೆಚ್ಚಿರುವ ಕಡಿಮೆ ಆದಾಯದ ಗಳಿಸುವವರಿಗೆ ಶೇ. 20ಕ್ಕಿಂತ ಹೆಚ್ಚು ಉಳಿಸಬಹುದಾದ ಹೆಚ್ಚಿನ ಆದಾಯ ಗಳಿಸುವವರಿಗೆ ಇದು ಸರಿಹೊಂದುವುದಿಲ್ಲ.

Good News: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ವೈದ್ಯಕೀಯ ಭತ್ಯೆ ಹೆಚ್ಚಳ

ಇದು ಸಾಲವನ್ನು ಪಾವತಿಸುವುದು ಅಥವಾ ದೊಡ್ಡ ಖರೀದಿಗಳಿಗಾಗಿ ಉಳಿತಾಯದಂತಹ ವೈಯಕ್ತಿಕ ಹಣಕಾಸಿನ ಗುರಿಗಳನ್ನು ತಿಳಿಸುವುದಿಲ್ಲ ಮತ್ತು ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಜೀವನ ವೆಚ್ಚವನ್ನು ಪರಿಗಣಿಸುವುದಿಲ್ಲ. ಈ ನಿಯಮವು ಅಗತ್ಯಗಳು ಮತ್ತು ಬಯಕೆಗಳು ನಡುವಿನ ವ್ಯತ್ಯಾಸವನ್ನು ನಾವು ತಿಳಿದಿರಬೇಕು ಮತ್ತು ಅದಕ್ಕೆ ನಿಷ್ಠರಾಗಿರಬೇಕು ಎಂಬುದನ್ನು ಹೇಳುತ್ತದೆ.