Wednesday, 13th November 2024

Money Tips: ಬೆಸ್ಟ್ ಲಾರ್ಜ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ ಯಾವುದು?

Money Tips

ಬೆಂಗಳೂರು: ಸಂಪತ್ತು ಹೆಚ್ಚಿಸಲು ಮತ್ತು ಆರ್ಥಿಕವಾಗಿ ಸದೃಢರಾಗಲು ಮ್ಯೂಚುವಲ್‌ ಫಂಡ್‌ (Mutual fund)ನಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಮಾರ್ಗ ಎನಿಸಿಕೊಂಡಿದೆ. ಮ್ಯೂಚುವಲ್ ಫಂಡ್​ಗಳನ್ನು ವೃತ್ತಿಪರರು ನಿಭಾಯಿಸುತ್ತಾರೆ. ವಿವಿಧ ಸ್ತರದ ಕಂಪೆನಿಗಳ ಷೇರುಗಳ ಮೇಲೆ ಮ್ಯೂಚುವಲ್ ಫಂಡ್​ನ ಹಣ ಹೂಡಿಕೆ ಆಗಿರುತ್ತದೆ. ಅಂದರೆ ನೀವು ಮ್ಯೂಚುವಲ್ ಫಂಡ್​ಗೆ ಹಾಕುವ ಹಣವನ್ನು ವಿವಿಧ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಲಾಭದ ಉದ್ದೇಶಕ್ಕಾಗಿ ಮ್ಯೂಚುವಲ್ ಫಂಡ್ ನಿರ್ವಾಹಕರು ಹೂಡಿಕೆಯನ್ನು ಅಲ್ಲಿಂದಿಲ್ಲಿಗೆ ಬದಲಾಯಿಸುತ್ತಿರುತ್ತಾರೆ. ಈಕ್ವಿಟಿ, ಡೆಟ್‌, ಹಾಗೂ ಹೈಬ್ರಿಡ್‌ ಫಂಡ್‌ಗಳಂತಹ ಅನೇಕ ವರ್ಗಗಳ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳಿವೆ. ಇವುಗಳಲ್ಲಿ ಲಾರ್ಜ್‌-ಕ್ಯಾಪ್‌, ಸ್ಮಾಲ್‌-ಕ್ಯಾಪ್‌, ಇಂಡೆಕ್ಸ್‌, ಅಲ್ಪಾವಧಿ, ದೀರ್ಘಾವಧಿ ಮುಂತಾದ ಮ್ಯೂಚುವಲ್‌ ಫಂಡ್‌ಗಳಿವೆ. ಈ ಪೈಕಿ ಬೆಸ್ಟ್ ಲಾರ್ಜ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ ಎನ್ನುವ ವಿವರ ಇಲ್ಲಿದೆ (Money Tips).

ಲಾರ್ಜ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ಗಳು ತಮ್ಮ ಹೂಡಿಕೆಯಲ್ಲಿ 80% ಪಾಲನ್ನು ಮಾತ್ರ ಲಾರ್ಜ್‌ ಕ್ಯಾಪ್‌ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಕಳೆದ 1 ವರ್ಷದಲ್ಲಿ 30%ಗೂ ಹೆಚ್ಚು ಆದಾಯವನ್ನು ನೀಡಿರುವ ಲಾರ್ಜ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ಗಳು ಇಂತಿವೆ: ಬಂಧನ್‌ ಲಾರ್ಜ್‌ ಕ್ಯಾಪ್‌ ಫಂಡ್‌, ಡಿಎಸ್‌ಪಿ ಟಾಪ್‌ 100 ಈಕ್ವಿಟಿ ಪಂಡ್‌, ಇನ್‌ವೆಸ್ಕೊ ಇಂಡಿಯಾ ಲಾರ್ಜ್‌ ಕ್ಯಾಪ್‌ ಫಂಡ್‌ಗಳು 35% ರಿಟರ್ನ್‌ ಕೊಟ್ಟಿವೆ. ಕ್ವಾಂಟ್‌ ಲಾರ್ಜ್‌ ಕ್ಯಾಪ್‌ ಫಂಡ್‌ 37% ರಿಟರ್ನ್‌ ನೀಡಿದೆ. ಜೆಎಂ ಲಾರ್ಜ್‌ ಕ್ಯಾಪ್‌ ಫಂಡ್‌ 37% ಆದಾಯವನ್ನು ಹೂಡಿಕೆದಾರರಿಗೆ ಕೊಟ್ಟಿದೆ.

ಏನಿದು ನಿಫ್ಟಿ? ಇದರ ಮಹತ್ವ ಏನು?

ನ್ಯಾಶನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ನ ಸೂಚ್ಯಂಕ ನಿಫ್ಟಿ. ಎನ್‌ಎಸ್‌ಇನಲ್ಲಿ ನೋಂದಣಿಯಾಗಿರುವ 50 ಪ್ರಮುಖ ಕಂಪೆನಿಗಳ ಪರ್‌ಫಾರ್ಮೆನ್ಸ್‌ ಅನ್ನು ನಿಫ್ಟಿ ಅನುಸರಿಸುತ್ತದೆ. ಆದ್ದರಿಂದ ಇದನ್ನು ನಿಫ್ಟಿ 50 ಇಂಡೆಕ್ಸ್‌ ಎನ್ನುತ್ತಾರೆ. ದೊಡ್ಡ ಮತ್ತು ಪ್ರಭಾವಿ ಕಂಪೆನಿಗಳ ಏರಿಳಿತಗಳನ್ನು ಇದು ಟ್ರ್ಯಾಕ್‌ ಮಾಡುತ್ತದೆ. ಬಿಎಸ್‌ಇ ಸೆನ್ಸೆಕ್ಸ್‌ ಸೂಚ್ಯಂಕವು ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ನೋಂದಣಿಯಾಗಿರುವ 30 ಪ್ರಮುಖ ಕಂಪೆನಿಗಳ ಪರ್‌ಫಾರ್ಮೆನ್ಸ್‌ ಅನ್ನು ಅನುಸರಿಸುತ್ತದೆ. ನಿಫ್ಟಿಯ ಅಂಕಗಳನ್ನು ಷೇರುಗಳ ಮಾರುಕಟ್ಟೆ ಮೌಲ್ಯವನ್ನು ಬೇಸ್‌ ಮಾರ್ಕೆಟ್‌ ಕ್ಯಾಪಿಟಲ್‌ನಿಂದ ಭಾಗಿಸಿ, ಮತ್ತು 1,000ದಿಂದ ಗುಣಿಸಿ ನಿರ್ಧರಿಸಲಾಗುತ್ತದೆ. ನಿಫ್ಟಿ ಸೂಚ್ಯಂಕವು ಮಾರುಕಟ್ಟೆ ವೇಳೆಯಲ್ಲಿ ಪ್ರತಿ ಸೆಕೆಂಡಿಗೂ ಅಪ್‌ಡೇಟ್‌ ಆಗುತ್ತದೆ. ನಿಫ್ಟಿಯ ಬೇಸ್‌ ವಾಲ್ಯೂ 1,000 ಅಂಕ.

ಟಿವಿಎಸ್‌ ಷೇರುಗಳಲ್ಲಿ ಹೂಡಿದ್ರೆ ಲಾಭ

ನೀವು 2013ರಲ್ಲಿ ಟಿವಿಎಸ್‌ ಕಂಪನಿಯ ಜ್ಯುಪಿಟರ್ ಸ್ಕೂಟರ್‌ ಖರೀದಿಸುತ್ತಿದ್ದರೆ ಅದಕ್ಕೆ 52,000 ರೂ. ನೀಡಬೇಕಾಗುತ್ತಿತ್ತು. ಒಂದು ವೇಳೆ ನೀವು 52,000 ರೂ.ಗೆ ಟಿವಿಎಸ್‌ ಷೇರುಗಳನ್ನು ಖರೀದಿಸುತ್ತಿದ್ದರೆ ಈಗ ಎಷ್ಟು ಹಣ ಸಂಪಾದಿಸಬಹುದಿತ್ತು ಗೊತ್ತೇ? ನಿಮಗೆ ಅಚ್ಚರಿಯಾದೀತು. ಏಕೆಂದರೆ ಆಗ ಟಿವಿಎಸ್‌ ಷೇರಿನ ದರ 33 ರೂ. 70 ಪೈಸೆಯಷ್ಟಿತ್ತು. 1,544 ಷೇರುಗಳನ್ನು ಖರೀದಿಸಬಹುದಿತ್ತು. ಆದರೆ ಅದರ ಬೆಲೆ ಈಗ ಬರೋಬ್ಬರಿ 37 ಲಕ್ಷ ರೂ.ಗೆ ಬೆಳೆದಿರುತ್ತಿತ್ತು. ಈಗ ಟಿವಿಎಸ್‌ ಷೇರಿನ ಬೆಲೆ 2,445 ರೂ.ಗೆ ಏರಿಕೆಯಾಗಿದೆ.

ಈ ಸುದ್ದಿಯನ್ನೂ ಓದಿ: ಮ್ಯೂಚುವಲ್‌ ಫಂಡ್‌ಗಳೂ ಉತ್ತಮ ಆಯ್ಕೆ