Sunday, 15th December 2024

ಜು.19 ರಿಂದ ಸಂಸತ್ತಿನ ಮಾನ್ಸೂನ್ ಅಧಿವೇಶನ ಆರಂಭ

ನವದೆಹಲಿ : ಸಂಸತ್ತಿನ ಮಾನ್ಸೂನ್ ಅಧಿವೇಶನ ಜು.19 ರಿಂದ ಆರಂಭವಾಗಲಿದ್ದು, ಆಗಸ್ಟ್ 13ರವರೆಗೆ ನಡೆಯಲಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.

ಅಧಿವೇಶವನ್ನ ಕೋವಿಡ್ ನಿಯಮಗಳ ಅನುಸಾರ ನಡೆಸಲಿದ್ದು, ಎಲ್ಲಾ ಸದಸ್ಯರು ಮತ್ತು ಮಾಧ್ಯಮಗಳಿಗೆ ಅವಕಾಶ ನೀಡಲಾಗುವುದು. ಇನ್ನು ಆರ್ ಟಿಪಿಸಿಆರ್ ಪರೀಕ್ಷೆ ಕಡ್ಡಾಯವಲ್ಲ. ಅದ್ರಂತೆ, ಲಸಿಕೆಗೆ ಒಳಗಾಗದವರನ್ನ ಪರೀಕ್ಷೆಗೆ ಒಳಪಡಿಸುವಂತೆ ನಾವು ವಿನಂತಿಸುತ್ತೇವೆ ಎಂದರು.