ಹಲ್ವಾ ಎಂದಾಕ್ಷಣ ಎಂಥವರ ಬಾಯಲ್ಲೂ ನೀರೂರುವಂತೆ ಮಾಡುತ್ತದೆ. ಆರೋಗ್ಯಕರವಾದ ಮತ್ತು ಎಲ್ಲರಿಗೂ ಇಷ್ಟವಾಗುವ ಹೆಸರು ಬೆಳೆಯ ಹಲ್ವಾ (Moong Dal Halwa Recipe) ಮಾಡುವುದು ಸುಲಭ ಮಾತ್ರವಲ್ಲ ಚಳಿಗಾಲದಲ್ಲಿ ಆರೋಗ್ಯಕ್ಕೂ ಬಹಳ ಒಳ್ಳೆಯದು.
ಚಳಿಗಾಲದಲ್ಲಿ ತಾಪಮಾನ ಹೆಚ್ಚಳವಾಗುವುದರಿಂದ ಹೆಸರು ಬೇಳೆಯ ಹಲ್ವಾವನ್ನು ಹೆಚ್ಚಿನವರು ಸವಿಯಲು ಇಷ್ಟ ಪಡುತ್ತಾರೆ. ಇದರ ಮುಖ್ಯ ಉದ್ದೇಶ ಹೆಸರು ಬೇಳೆ ದೇಹಕ್ಕೆ ತಂಪನ್ನು ನೀಡುತ್ತದೆ. ಹೆಚ್ಚಾಗಿ ಮಕ್ಕಳು ಇದನ್ನು ಇಷ್ಟಪಡುತ್ತಾರೆ. ಹೀಗಾಗಿ ಆರೋಗ್ಯ ಮತ್ತು ರುಚಿಯನ್ನು ಬಯಸುವವರು ಖಂಡಿತವಾಗಿಯೂ ಒಮ್ಮೆ ಹೆಸರು ಬೇಳೆಯ ಹಲ್ವಾವನ್ನು ಸವಿಯಿರಿ.
ಬೇಕಾಗುವ ಸಾಮಗ್ರಿಗಳು
ಹೆಸರು ಬೇಳೆಯ ಹಲ್ವಾ ಮಾಡಲು ಬೇಕಿರುವುದು ಕೆಲವೇ ಕೆಲವು ಪದಾರ್ಥಗಳು.
ಮುಖ್ಯವಾಗಿ ಹಳದಿ ಹೆಸರು ಬೇಳೆ ಒಂದರಿಂದ ಎರಡು ಕಪ್, ಹಾಲು ಒಂದರಿಂದ ಎರಡು ಕಪ್, ಕೇಸರಿ ಒಂದು ಚಿಟಿಕೆ, ಏಲಕ್ಕಿ ಪುಡಿ ಅರ್ಧ ಚಮಚ, ಬಾದಾಮಿ ಚೂರುಗಳು ಅರ್ಧ ಚಮಚ, ತುಪ್ಪ: ಎರಡು ಚಮಚ, ಸಕ್ಕರೆ ಒಂದು ಕಪ್.
ಮಾಡುವ ವಿಧಾನ
ಹೆಸರು ಬೇಳೆ ಹಲ್ವಾ ಮಾಡುವ ಮೊದಲು ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದ ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ ಸಂಪೂರ್ಣ ನೀರನ್ನು ತೆಗೆದು ಬಸಿದು ಮಿಕ್ಸಿಯಲ್ಲಿ ಒರಟಾಗಿ ಪುಡಿ ಮಾಡಿ. ಬಳಿಕ ಸ್ವಲ್ಪ ಉಗುರು ಬೆಚ್ಚಗಿನ ಹಾಲನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಒಂದು ಚಿಟಿಕೆ ಕೇಸರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಪಕ್ಕಕ್ಕೆ ಇರಿಸಿ.
ಪ್ಯಾನ್ ಒಂದರಲ್ಲಿ ತುಪ್ಪವನ್ನು ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ತುಪ್ಪ ಕರಗಿದ ತಕ್ಷಣ ರುಬ್ಬಿದ ಹೆಸರು ಬೇಳೆಯನ್ನು ಅದರಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
ಸುಮಾರು 25- 30 ನಿಮಿಷಗಳ ಕಾಲ ಚೆನ್ನಾಗಿ ಹುರಿದು ಅದು ಬೆಂದಾಗ ಒಂದು ಕಪ್ ಹಾಲು ಮತ್ತು ನೀರು ಸೇರಿಸಿ ಚೆನ್ನಾಗಿ ಕಲಸಿ. ಇದರ ಅನಂತರ ಸುಮಾರು 7- 8 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ. ಬಳಿಕ ಹಾಲು ಸಮೇತ ಕೇಸರಿ, ಸಕ್ಕರೆಯನ್ನು ಬೆರೆಸಿ ಚೆನ್ನಾಗಿ ಕಲಸಿ.
Cholestrole Controle Tips: ಕೆಟ್ಟ ಕೊಲೆಸ್ಟ್ರಾಲ್ ನೈಸರ್ಗಿಕವಾಗಿ ಕಡಿಮೆ ಮಾಡಲು ಈ ಬೀಜಗಳನ್ನು ಸೇವಿಸಿ
ಎಲ್ಲವನ್ನು ಒಂದು ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ. ಐದರಿಂದ ಏಳು ನಿಮಿಷಗಳ ಕಾಲ ಚೆನ್ನಾಗಿ ಬೇಯಲಿ. ಬಳಿಕ ರುಚಿಕರವಾದ ಹೆಸರು ಬೇಳೆ ಹಲ್ವಾಕ್ಕೆ ಬಾದಾಮಿ ಚೂರುಗಳನ್ನು ಸೇರಿಸಿ. ಬಿಸಿ ಇರುವಾಗಲೇ ಸವಿಯಿರಿ.