ಅಜಂತಾ ಮ್ಯಾನುಫ್ಯಾಕ್ಚರಿಂಗ್ ಲಿಮಿಟೆಡ್ ಮೊರ್ಬಿಯಲ್ಲಿನ ಮಚ್ಚು ನದಿಯಲ್ಲಿ ಬ್ರಿಟಿಷರ ಕಾಲದ ಸೇತುವೆಯನ್ನು ನವೀಕರಿಸುವ, ದುರಸ್ತಿ ಮಾಡುವ ಮತ್ತು ನಿರ್ವಹಿಸುವ ಗುತ್ತಿಗೆಯನ್ನು ಪಡೆದು ಕೊಂಡಿತ್ತು.
ಮೊರ್ಬಿಯ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್, ಎಂಜೆ ಖಾನ್ ಅವರು ಪಟೇಲ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದರು. ಮೊರ್ಬಿ ಸೇತುವೆಯ ನವೀಕರಣದ ಗುತ್ತಿಗೆಯನ್ನು ಹೊಂದಿದ್ದ ಒರೆವಾ ಗ್ರೂಪ್‌ನ ಜಯಸುಖ್ ಪಟೇಲ್ ವಿರುದ್ಧ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ. ಇನ್ನೂ ಲುಕ್‌ಔಟ್ ನೋಟಿಸ್ ನೀಡಿಲ್ಲ ಎಂದು ಸರ್ಕಾರಿ ಅಭಿಯೋಜಕ ಸಂಜಯ್ ವೋರಾ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದರು.
ಪಟೇಲ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿ ಗಾಗಿ ಜನವರಿ 20 ರಂದು ಮೊರ್ಬಿ ಸೆಷನ್ಸ್ ನ್ಯಾಯಾಲಯಕ್ಕೆ ತೆರಳಿದ್ದರು, ಆದರೆ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಜರಾಗದ ಕಾರಣ ವಿಚಾರಣೆಯನ್ನು ಫೆಬ್ರವರಿ 1ಕ್ಕೆ ಮುಂದೂಡಲಾಯಿತು.
ಗುಜರಾತ್‌ನ ಮೊರ್ಬಿಯ ಮಚ್ಚು ನದಿಗೆ ಶತಮಾನದಷ್ಟು ಹಳೆಯದಾದ ತೂಗುಸೇತುವೆ ಬಿದ್ದ ಪರಿಣಾಮ 134 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನವೆಂಬರ್ 7 ರಂದು ಗುಜರಾತ್ ಹೈಕೋರ್ಟ್ ಮೊರ್ಬಿ ಅಪಘಾತವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ, ರಾಜ್ಯ ಗೃಹ ಇಲಾಖೆ ಸೇರಿದಂತೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಮತ್ತು ಒಂದು ವಾರದೊಳಗೆ ವರದಿ ಕೇಳಿದೆ.